ನಂದಿ ಯಾತ್ರೆ
ಋಷಿ-ಕೃಷಿ ಸಂಸ್ಕೃತಿ ಪುನಶ್ಚೇತನ
-----------
ಋಷಿ-ಕೃಷಿ ಸಂಸ್ಕೃತಿ ಪುನಶ್ಚೇತನ
-----------
ಕೃಷಿಯಲ್ಲಿ ಪ್ರಕೃತಿಗೆ ಪೂರಕವಾದ ನಂದಿ ಶಕ್ತಿ ಬಳಕೆಯು ಕಡಿಮೆಯಾಗಿ ತೈಲ ಆಧಾರಿತ ಯಂತ್ರ ಶಕ್ತಿಯ ಬಳಕೆ ಹೆಚ್ಚಾದಂತೆ ನಂದಿ ಸಂಪತ್ತು ಕ್ಷೀಣಿಸುತ್ತಿದೆ. ಇದರಿಂದ ರೈತರ ಕೃಷಿ ಸಾಗುವಳಿ ವೆಚ್ಚ ಹೆಚ್ಚಾಗಿ ಆದಾಯ ಕಡಿಮೆಯಾಗುತ್ತಿದೆ. ಹಾಗಾಗಿ ರೈತರು ವಿವಿಧ ಮೂಲಗಳಿಂದ ಪಡೆದ ಸಾಲ ಮರುಪಾವತಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಭಾರತ ದೇಶದ ಮಹಾರಾಷ್ಟ್ರ, ಕರ್ನಾಟಕ, ಆಂದ್ರ ಪ್ರದೇಶ, ತಮಿಳುನಾಡು ಹಾಗೂ ಇತರ ರಾಜ್ಯಗಳಲ್ಲಿ ಸುಸ್ತಿದಾರ ರೈತ ಸಾಲಗಾರರ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಆತ್ಮಹತ್ಯೆಗೆ ಶರಣಾಗುವ ರೈತರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದೆ. ಇತ್ತೀಚೆಗೆ ನಂದಿ ಸಂಪತ್ತು ಕಾಸಾಯಿಖಾನೆಯ ಪಾಲಾಗುವುದು ಹೆಚ್ಚಾಗುತ್ತಿರುವುದಕ್ಕೆ ಹಾಗೂ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿರುವುದಕ್ಕೆ ಮೂಲ ಕಾರಣ, ಕಳೆದ ಹಲವು ದಶಕಗಳಿಂದ ನಂದಿ ಕೃಷಿಗೆ ಸರ್ಕಾರಗಳು ಸೂಕ್ತ ಪ್ರೋತ್ಸಾಹ ನೀಡದೇ ಇರುವುದಾಗಿದೆ. ಕೊನೆಗೆ ನಂದಿ ಕೃಷಿ ನಾಶದ ದುಷ್ಪರಿಣಾಮವು ಭೂಮಿ ಬರಡಾಗುವಿಕೆಯಲ್ಲಿ ವ್ಯಕ್ತವಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕೇವಲ ೪೦ ಪ್ರತಿಶತ ಭೂಮಿ ಸಹಜ ಸ್ಥಿತಿಯಲ್ಲಿ ಉಳಿದಿದೆ ಎಂದು ಇತ್ತೀಚೆಗೆ ಮಾನ್ಯ ಮುಖ್ಯ ಮಂತ್ರಿಗಳು ಕಳವಳ ವ್ಯಕ್ತಪಡಿಸಿರುವುದು ವಾಸ್ತವ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಭೂಮಿಯ ಫಲವತ್ತತೆ ಹೆಚ್ಚಿಸುವುದರ ಜೊತೆಗೆ ರೈತರನ್ನು ಸಾಲಮುಕ್ತರಾಗುವಂತೆ ಮಾಡುವ ನಂದಿ ಕೃಷಿ ಪುನಶ್ಚೇತನದ ಕುರಿತು ಜನಜಾಗೃತಿ ಮೂಡಿಸಬೇಕಾಗಿದೆ. ನಂದಿ ಕೃಷಿ ಪುನಶ್ಚೇತನದ ಜವಾಬ್ದಾರಿಯನ್ನು ಜನಪ್ರತಿನಿಧಿಗಳಿಗೆ ವಹಿಸಲು ಪ್ರತಿಯೊಬ್ಬ ಪ್ರಜ್ಞಾವಂತರು ಪ್ರಯತ್ನಿಸಬೇಕಾಗಿದೆ.
ನಂದಿ ಕೃಷಿ ಪುನಶ್ಚೇತನಕ್ಕಾಗಿ ಪ್ರಾರಂಭಿಸಿದ ಜನಜಾಗೃತಿ ಅಭಿಯಾನಗಳು
ಶತಮಾನ ಕಂಡ ಅಪರೂಪದ ಸಂತರಾದ ಲಿಂಗೈಕ್ಯ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ನಂದಿ ಕೃಷಿ ಪುನಶ್ಚೇತನದ ಪ್ರಯತ್ನ ಪ್ರಾರಂಭವಾಗಿದೆ. ಸ್ವಾಮೀಜಿಯವರ ಪೂರ್ವಾಶ್ರಮ ಮನೆಯಿಂದ ನಂದಿ ಯಾತ್ರೆ ಎಂಬ ಜೋಡೆತ್ತಿನ ಬಂಡಿಗಳ ಯಾತ್ರೆಯನ್ನು ಪ್ರಾರಂಭಿಸಿ ವಿಜಯಪುರ ಜಿಲ್ಲೆಯಾದ್ಯಂತ ಸಂಚರಿಸುವ ಮೂಲಕ ಜನಜಾಗೃತಿ ಮೂಡಿಸಲಾಗಿದೆ. ಜೋಡೆತ್ತಿನ ರೈತರ ನೇತೃತ್ವದಲ್ಲಿ ೪೦ “ರೈತ ಮಿತ್ರ ಸ್ವಯಂ ಸೇವಕರ ಸಂಘ” ಗಳನ್ನು ರಚಿಸಲಾಗಿದೆ. ಮುಂದುವರೆದು, ನಂದಿ ಕೃಷಿ ಪುನಶ್ಚೇತನದ ಜವಾಬ್ದಾರಿಯನ್ನು ಜನಪ್ರತಿನಿಧಿಗಳಿಗೆ ವಹಿಸುವ ಉದ್ದೇಶದಿಂದ ಎರಡು ರೀತಿಯ ಅಭಿಯಾನಗಳ ಮೂಲಕ ಪ್ರಯತ್ನಿಸಲಾಗುತ್ತಿದೆ.
1. ಪಕ್ಷಾತೀತ ಪತ್ರ ಚಳುವಳಿ: ಗ್ರಾಮಗಳಲ್ಲಿ ಜೋಡೆತ್ತಿನ ಕೃಷಿಕರನ್ನು ಸಂಘಟಿಸಿ ರೈತ ಮಿತ್ರ ಸ್ವಯಂ ಸೇವಕರ ಸಂಘವನ್ನು ಸ್ಥಾಪಿಸುವುದು ಹಾಗೂ ಜೋಡೆತ್ತಿನ ಕೃಷಿಕರಿಗೆ ಸೂಕ್ತ ಪ್ರೋತ್ಸಾಹ ನೀಡುವ ಯೋಜನೆ ಜಾರಿಗಾಗಿ ಬೇಡಿಕೆಯ ಮನವಿ ಪತ್ರವನ್ನು ಪಕ್ಷಾತೀತವಾಗಿ ಜನಪ್ರತಿನಿಧಿಗಳಿಗೆ ಸಲ್ಲಿಸುವ ವ್ಯವಸ್ಥೆ ಮಾಡುವುದು.
2. ಸಾಲಮುಕ್ತ ರೈತ ಭಾರತ ಅಭಿಯಾನ: ರೈತ ಸಾಲಗಾರರನ್ನು ಸಂಘಟಿಸುವುದು ಹಾಗೂ “ರೈತರ ಜಮೀನಿನ ಉತ್ಪಾದಕತೆ ಹೆಚ್ಚಿಸಬಲ್ಲ ಮಣ್ಣು ಪುನಶ್ಚೇತನ ಕಾನೂನು ಜಾರಿಯಾದರೆ ಮಾತ್ರ ಮುಂದಿನ ದಿನಗಳಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗುವುದು” ಎಂಬ ಸಂದೇಶವಿರುವ ಮನವಿ ಪತ್ರವನ್ನು ಬ್ಯಾಂಕ್ ಸಿಬ್ಬಂದಿಗಳ ಮೂಲಕ ರಾಜ್ಯ ಹಾಗೂ ದೇಶ ಮಟ್ಟದ ಅಧಿಕಾರಗಳ ವರೆಗೆ ರವಾನಿಸುವ ವ್ಯವಸ್ಥೆ ಮಾಡುವುದು. ಈ ಮೂಲಕ ರೈತರಿಗೆ ಪೂರಕವಾದ ಕಾನೂನು ಜಾರಿಗಾಗಿ ಬ್ಯಾಂಕ್ ಗಳ ಮೂಲಕ ಆಗ್ರಹಿಸುವುದು.
ನಮ್ಮ ಆಧ್ಯಾತ್ಮಿಕ ನಾಯಕರು ಬಯಸಿದ ಸುಸಂಸ್ಕೃತ ಸಮಾಜ ನಿರ್ಮಿಸುವುದಕ್ಕಾಗಿ ಅಯೋಜಿಸುತ್ತಿರುವ ವಿವಿಧ ಕಾರ್ಯಕ್ರಮಗಳು
1. ನಂದಿ ಯಾತ್ರೆ
3. ನಂದಿ ಸಮಾವೇಶ ಹಾಗೂ ಸಮ್ಮೇಳನಗಳು
4. ನಂದಿ ಸೇವಾ ಪ್ರೋತ್ಸಾಹ ಧನ ವಿತರಣೆ
7. ನಂದಿ ಕೃಷಿ ಪೋಷಿಸುವ ಕಂಬಿ ಮಲ್ಲಯ್ಯ
9. ರೈತ ಮಿತ್ರ ಸ್ವಯಂ ಸೇವಕರ ಸಂಘಗಳ ಸ್ಥಾಪನೆ
-----------
-----------
ರೈತರ ಸಮೃದ್ಧಿಗಾಗಿ ಜಗತ್ತಿನಾದ್ಯಂತ ಸದ್ಗರು ಅವರು ಪ್ರಾರಂಭಿಸಿದ
'ಮಣ್ಣು ಉಳಿಸಿ'
ಅಭಿಯಾನದ ಮೂಲ ಉದ್ದೇಶಕ್ಕೆ ಪೂರಕವಾಗಿ ಕೆಲಸ ಮಾಡುವುದು ನಮ್ಮ ಧ್ಯೇಯವಾಗಿದೆ.
"ರೈತರು ದೊಡ್ಡದಾದ ಗುರಿಯೊಂದಿಗೆ ಪಕ್ಷಾತೀತವಾಗಿ ಒಂದಾಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಾರ್ಗೋಪಾಯಗಳನ್ನು ಪರಿಚಯಿಸುವುದು."
ರೈತರನ್ನು ಒಂದುಗೂಡಿಸುವ ಪಕ್ಷಾತೀತ ಬೇಡಿಕೆಗಳು:
1. ಕೃಷಿ ಕ್ಷೇತ್ರಕ್ಕೆ ಪ್ರತಿ ವರ್ಷ 25 ಪ್ರತಿಶತ ಬಡ್ಜೆಟ್ ನ್ನು ಮುಂದಿನ 15 ವರ್ಷಗಳ ವರೆಗೆ ಮೀಸಲಿಡುವ ಕಾನೂನು ಜಾರಿಗೊಳಿಸುವುದು ಹಾಗೂ ‘ಮಣ್ಣು ಉಳಿಸಿ’ ಅಭಿಯಾನದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ರೈತರ ಅದಾಯ ಹೆಚ್ಚಿಸುವ "ಮಣ್ಣು ಪುನಶ್ಚೇತನ ಕಾನೂನು" ಜಾರಿಗೊಳಿಸಿ, ಸಾವಯವ ಇಂಗಾಲದ ಪ್ರಮಾಣಕ್ಕೆ ಅನುಗುಣವಾಗಿ ರೈತರಿಗೆ ಪ್ರೋತ್ಸಾಹ ಧನ ನೀಡುವುದು.
2. ಭಾರತ ದೇಶದಲ್ಲಿ 70 ಪ್ರತಿಶತ ಜನರು ಕೃಷಿಯನ್ನು ಅವಲಂಬಿಸಿದ ಕಾರಣ, ಶಾಲಾ ಪಠ್ಯಪುಸ್ತಕಗಳ ಕನಿಷ್ಠ 33 ಪ್ರತಿಶತ ವಿಷಯವು ಕೃಷಿಗೆ ಸಂಬಂದಿಸಿದ ವಿಷಯವಾಗುವಂತೆ ಕಾನೂನು ಜಾರಿಗೊಳಿಸುವುದು.
3. ಭಾರತ ದೇಶವು ಜಗತ್ತಿನಲ್ಲಿ ಅತೀ ಪುರಾತನ ಕೃಷಿ ಸಂಸ್ಕೃತಿ ಹೊಂದಿರುವುದಕ್ಕೆ ಮೂಲ ಆಧಾರ ಸ್ತಂಭವಾದ ಎತ್ತು ಆಧಾರಿತ ಕೃಷಿಗೆ ವಿಶೇಷ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಜಾರಿಗೊಳಿಸುವುದರ ಜೊತೆಗೆ ‘ನಂದಿ’ಯನ್ನು ರಾಷ್ಟ್ರ ಪ್ರಾಣಿಯನ್ನಾಗಿ ಹೊಸದಾಗಿ ಘೋಷಣೆ ಮಾಡುವುದು.
--------------------
ನಿಮ್ಮ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ರೈತರನ್ನು ಒಗ್ಗೂಡಿಸುವ ಮಾರ್ಗಗಳನ್ನು ತಿಳಿಯಲು 'ರೈತ ರಾಜಕೀಯ' ಪುಸ್ತಕ ಓದಿ
ನಡೆ ನಮನ ಪುಸ್ತಕವನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಓದಿ "ಅಭೀಃ ಫೌಂಡೇಶನ್" ಮೂಲಕ ಪ್ರಾರಂಭಿಸಿದ ಅಭಿಯಾನದ ಉದ್ದೇಶ ಹಾಗೂ ಧ್ಯೇಯದ ಕುರಿತು ಸ್ಪಷ್ಟತೆ ಪಡೆಯಿರಿ.
ಪರಿಹಾರ ಕಂಡುಕೊಳ್ಳಲೇಬೇಕಾದ ರೈತರ ಪ್ರಮುಖ ಸಮಸ್ಯೆಗಳು
ಮಣ್ಣಿನಲ್ಲಿರುವ ಜೀವಸತ್ವ ನಾಶವಾಗಿ ಕಳಪೆ ಆಹಾರ ಉತ್ಪಾದನೆಆಗುವುದರ ಜೊತೆಗೆ ಮಣ್ಣು ಮರಭೂಮಿಕರಣಗೊಳ್ಳುತ್ತಿದೆ.
ರೈತರ ಜಮೀನುಗಳಲ್ಲಿ ಕೆಲಸ ಮಾಡುವ ಕೆಲಸಗಾರರ ತೀವ್ರ ಕೊರತೆ ಉಂಟಾಗುತ್ತಿದೆ.
ಖರ್ಚು ಹೆಚ್ಚಾಗಿ ಆದಾಯ ಕಡಿಮೆಯಾಗುತ್ತಿದೆ.
ಬೆಳೆದ ಬೆಳೆಗೆ ಒಳ್ಳೆಯ ಬೆಲೆ ದೊರೆಯುತ್ತಿಲ್ಲ.
ನೀರಾವರಿ ಪ್ರದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ಇಳುವರಿ ಕುಂಠಿತವಾಗುತ್ತಿದೆ.
"ಇಂದೇ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ, ಬನ್ನಿ ಇದನ್ನು ಸಾಧ್ಯವಾಗಿಸೋಣ."
ಆಧ್ಯಾತ್ಮಿಕ ಸತ್ಪುರುಷರ ಜನ್ಮ ಸ್ಥಳ ಹಾಗೂ ನೆಲೆಸಿರುವ ಸ್ಥಳಗಳಿಂದ ರೈತರಿಂದ ಅಭಿಯಾನಕ್ಕೆ ಚಾಲನೆ
1. ಅನ್ನದಾತನಿಗೆ ಮೊದಲ ಆದ್ಯತೆ ನೀಡಿ ಪತ್ರ ಚಳುವಳಿಯ
✏️ ಕರಪತ್ರಕ್ಕಾಗಿ ಕ್ಲಿಕ್ ಮಾಡಿ ✏️
2. ಪಕ್ಷಾತೀತವಾಗಿ ರಾಜಕೀಯ ನಾಯಕರಿಗೆ ಸಲ್ಲಿಸಬಹುದಾದ
✏️ ಮನವಿ ಪತ್ರಕ್ಕಾಗಿ ಕ್ಲಿಕ್ ಮಾಡಿ ✏️
ನಿಮ್ಮ ಸ್ಥಳಗಳಲ್ಲಿ “ಅನ್ನದಾತನಿಗೆ ಮೊದಲ ಆದ್ಯತೆ ನೀಡಿ”ಜನಜಾಗೃತಿ ಕಾರ್ಯಕ್ರಮ ಆಯೋಜಿಸಲು ಸಂಪರ್ಕಿಸಿ
ಇದಕ್ಕೆ ಪರಿಹಾರ ಕಂಡುಕೊಳ್ಳುವ ಸೂಕ್ತ ಸಮಯ ಯಾವುದು?
“ಮಣ್ಣು ಮಿತ್ರ”
ಎಂಬ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಇಚ್ಚಿಸುವವರಿಗಾಗಿ
ಕರ್ನಾಟಕ ರಾಜ್ಯಾದ್ಯಂತ ನಡೆಯುತ್ತಿರುವ "ಅನ್ನದಾತನಿಗೆ ಮೊದಲ ಆದ್ಯತೆ ನೀಡಿ" ಚಳುವಳಿಯ ಮೂಲಕ ಮಣ್ಣು ಪುನಶ್ಚೇತನ ಕಾನೂನು ಅನುಷ್ಠಾನಗೊಳಿಸುವ ವಿವಿಧ ಹಂತಗಳು
ಇಂದೇ ಮಣ್ಣು ಮಿತ್ರರಾಗಿ