"ಇಂದು ಈ ಭೂಮಿಯ ಮೇಲೆ ಮಾಡಲೇಬೇಕಾದ ಮೊದಲ ಕೆಲಸವೇ ಮಣ್ಣು ಉಳಿಸುವುದಾಗಿದೆ"
ರೈತ ಮಿತ್ರ ಸಂಸ್ಥೆ
ಸಂಘ ಸಂಸ್ಥೆಗಳು ಆಯೋಜಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಮಣ್ಣು ಉಳಿಸಿ ಅಭಿಯಾನದ ಕುರಿತು ಜನಜಾಗೃತಿ ಮೂಡಿಸಲು ಕೇವಲ 11 ನಿಮಿಷ ಸಮಯ ನೀಡುವ ಮೂಲಕ ರೈತ ಮಿತ್ರ ಸಂಸ್ಥೆ ಎಂಬ ಬಿರುದನ್ನು ಪಡೆಯಬಹುದು.
ಸಂಘ ಸಂಸ್ಥೆಗಳು ತಾವು ಆಯೋಜಿಸುವ ಯಾವುದೇ ಕಾರ್ಯಕ್ರಮದಲ್ಲಿ ಮಣ್ಣು ಉಳಿಸಿ ಅಭಿಯಾನದ ಕುರಿತು ಜನಜಾಗೃತಿ ಮೂಡಿಸುವುದಕ್ಕಾಗಿ ಕನಿಷ್ಠ 11 ನಿಮಿಷ ಮೀಸಲಿಡಬೇಕಾಗುವುದು. ಹೀಗೆ ಸಂಸ್ಥೆಯು ಆಯೋಜಿಸುವ ಕನಿಷ್ಠ 11 ಕಾರ್ಯಕ್ರಮಗಳಲ್ಲಿ ಮಣ್ಣು ಉಳಿಸಿ ಅಭಿಯಾನದ ಕುರಿತು ಜನಜಾಗೃತಿ ಮೂಡಿಸಿದರೆ ರೈತ ಮಿತ್ರ ಸಂಸ್ಥೆ ಎಂಬ ಬಿರುದು ಪಡೆಯಲು ಅರ್ಹವಾಗುವುದು.
ಪಾಲ್ಗೊಂಡ ಸಂಸ್ಥೆಯು ಜನಜಾಗೃತಿ ಮೂಡಿಸಿದ ಕುರಿತು ಫೋಟೋ ಅಥವಾ ವಿಡಿಯೋ ಹಂಚಿಕೊಳ್ಳಬೇಕಾಗುವುದು.
ಜನಜಾಗೃತಿ ಮೂಡಿಸಿದ 11 ಕಾರ್ಯಕ್ರಮಗಳ ವಿವರಣೆಯನ್ನು ನೀಡಬೇಕಾಗುವುದು.
ಈ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಿದ ಮಣ್ಣು ಮಿತ್ರ ಸಂಸ್ಥೆಗಳನ್ನು ಸೂಕ್ತ ವೇದಿಕೆಯ ಮೇಲೆ ಕರೆತಂದು ಗುರುತಿಸಿ ರೈತ ಮಿತ್ರ ಸಂಸ್ಥೆ ಎಂಬ ಬಿರುದು ಕೊಡಲಾಗುವುದು.
ತಮ್ಮ ಸಂಘ ಸಂಸ್ಥೆಗಳ ಹೆಸರನ್ನು ನೋಂದಾಯಿಸಿ ಸಂಪರ್ಕಿಸಿ