ಅಭೀಃ ಫೌಂಡೇಶನ್, ವಿಜಯಪುರ

ಸಂಸ್ಥಾಪಕರು: 

ಬಸವರಾಜ ಎನ್. ಬಿರಾದಾರನಮ್ಮ ತಂಡ (OUR TEAM)

Abhi Foundation

Board of Directors


1. Basavaraj Biradar, Gold medalist in M.Sc.(Agri.)- Served as Agriculture officer for 10 years and after actively involving in save soil movement resigned to a government job and started Abhi Foundation to make ecological issue into political issue.

2. Muttu Sarashetti, Entrepreneur – Have travelled across globe as Software Engineer and now started IT company in Vijayapura. Also, Setup organic market platform called “Arogyadata” for Organic farmers to sell their Organic Produce. 

 3. S T Patil, Progressive Farmer- Practiced organic farming for more than 25 years and he has inspired thousands of farmers to practice organic farming by his motivational speeches.

4. Aravind Koulagi, M.Sc.(Agri.)- Served in sugarcane industry for more than 20 years and guided for FPO formation to thousands of farmers

5. Udaykumar Yalawar, Social Worker- Served in Soudi Arabia for 10 years and now he is well known personality to many people in North karnataka by his humble works. 

6. Shatteppa Dundappa Navi, Progressive Farmer and Trainer- Very innovative farmer and experimenter in the Vijayapur district. He has trained thousands of farmers for implementation organic farming practices.

7. Mahadevi Onarotti, Saint- Akka has dedicated her life spreading of the messages of great social reformer Sri Basavanna and presently looking after ‘Aum Spiritual center’ started by the grace of sadhguru at vijayapur district.

ಸಂಸ್ಥಾಪಕರ ಪರಿಚಯ


ಬಸವರಾಜ ಬಿರಾದಾರ ಅವರು ಕಾಲೇಜು ವಿದ್ಯಾಭ್ಯಾಸ ಮಾಡುವಾಗ ಸತತ 3 ವರ್ಷಗಳ ಕಾಲ ವಿದ್ಯಾರ್ಥಿ ಸಂಘದ ನಾಯಕರಾಗಿ ಕೆಲಸ ಮಾಡುವುದರ ಜೊತೆಗೆ  M.Sc.(Agri.)ಯಲ್ಲಿ ಗೋಲ್ಡ್ ಮೆಡಲ್ ಪಡೆದು ಉತ್ತೀರ್ಣರಾಗಿದ್ದಾರೆ. ಮೂರು ವರ್ಷಗಳ ಕಾಲ ಪ್ರೈವೆಟ್ ಕಂಪನಿಯಲ್ಲಿ ಸಿ.ಎಸ್.ಅರ್ ಅಧಿಕಾರಿಯಾಗಿ ಮತ್ತು 10 ವರ್ಷ ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಗುರು ಅವರು ಪ್ರಾರಂಭಿಸಿದ ‘ಮಣ್ಣು ಉಳಿಸಿ’ ಅಭಿಯಾನದಿಂದ ಸ್ಪೂರ್ತಿ ಪಡೆದು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ “ಪರಿಸರ ಹಾಗೂ ರೈತರ ಸಮಸ್ಯೆಗಳು ರಾಜಕೀಯ ಸಮಸ್ಯೆಗಳನ್ನಾಗಿಸಬೇಕು” ಎಂಬ ಉದ್ದೇಶದಿಂದ ‘ಅಭೀಃ ಫೌಂಡೇಶನ್’ ಎಂಬ ಸರ್ಕಾರೇತರ ಸಂಸ್ಥೆಯನ್ನು ಪ್ರಾರಂಭಿಸಿ ‘ಋಷಿ-ಕೃಷಿ ಸಂಸ್ಕೃತಿ ಪುನಶ್ಚೇತನ’ ಎಂಬ ಯೋಜನೆಯಡಿ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ದೂರದೃಷ್ಟಿಯ ನಾಯಕತ್ವ ಅಭಿವೃದ್ದಿಯ ಉದ್ದೇಶದಿಂದ ‘ಓಂ ಲೀಡರಶಿಪ್ ಅಕಾಡೆಮಿ’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ವಿವಿಧ ಸಂಘ-ಸAಸ್ಥೆಗಳ ಮುಖ್ಯಸ್ಥರು ಹಾಗೂ ಉದ್ಯೋಗಿಗಳಿಗೆ ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಮುಂದಿನ ದಿನಮಾನಗಳಿಗೆ ಅವಶ್ಯವಿರುವ ಸಮರ್ಥ ನಾಯಕರನ್ನು ತಯಾರಿ ಮಾಡುತ್ತಿದ್ದಾರೆ. ವ್ಯಕ್ತಿತ್ವ ವಿಕಸನ, ಪರಿಸರ, ಯೋಗ ಹಾಗೂ ಆಧ್ಯಾತ್ಮಿಕ ವಿಷಯಗಳ ಕುರಿತು ಸಾವಿರಕ್ಕಿಂತ ಅಧಿಕ ಉಪನ್ಯಾಸಗಳನ್ನು ವಿವಿಧ ವೇದಿಕೆಗಳಲ್ಲಿ ನೀಡಿದ್ದಾರೆ.

ನಾಯಕತ್ವದ ಕುರಿತು 'ಅಭೀಃ’, ಯೋಗ ಸಾಧನಗಳ ಮಹತ್ವದ ಕುರಿತು 'ಸಾಧ್ಯತೆ’, ಪ್ರಕೃತಿಯ ಮಹತ್ವದ ಕುರಿತು 'ಉಸಿರು ಹಾಗೂ ಭಾರತೀಯ ಆಧ್ಯಾತ್ಮಿಕ ನಾಯಕರ ಹಾದಿಯಲ್ಲಿ ನಡೆಯುವುದರ ಮಹತ್ವದ ಕುರಿತು ‘ನಡೆ ನಮನ’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಇತ್ತೀಚೆಗೆ ರೈತ ಸಂಘಟನೆ ಬಲಗೊಳಿಸುವ ಮಾರ್ಗೋಪಾಯಗಳ ಕುರಿತು 'ರೈತ ರಾಜಕೀಯ' ಎಂಬ ಬರೆದಿದ್ದಾರೆ.

ಸದ್ಗುರು ಅವರು ಜಗತ್ತಿನಾದ್ಯಂತ ಪ್ರಾರಂಭಿಸಿದ ‘ಮಣ್ಣು ಉಳಿಸಿ’ ಅಭಿಯಾನದಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಏಕಾಂಗಿಯಾಗಿ ಉತ್ತರ ಕರ್ನಾಟಕದಾದ್ಯಂತ ಬೈಕ್ ಮೇಲೆ ಪ್ರಯಾಣಿಸಿ ಜನರಿಗೆ ಅಭಿಯಾನದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಕೇವಲ 28 ದಿನಗಳಲ್ಲಿ 3000 ಕಿ. ಮೀ. ಬೈಕ್ ಮೇಲೆ ಪ್ರಯಾಣಿಸಿ 155 ಕ್ಕಿಂತ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿ 26000 ಕ್ಕಿಂತ ಅಧಿಕ ಜನರಿಗೆ ಮಣ್ಣಿನ ಕುರಿತು ಜಾಗೃತಿ ಮೂಡಿಸಿದ್ದಾರೆ. 

2023ರ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ರಾಜ್ಯ ಮಟ್ಟದ ‘ನಡೆ ನಮನ’ ಎಂಬ ಅಭಿಯಾನ ಆಯೋಜಿಸಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ರೈತರಿಗೆ ವರದಾನವಾಗುವ ‘ಮಣ್ಣು ಪುನಶ್ಚೇತನ ಕಾನೂನು’ ಜಾರಿಗಾಗಿ ಪಕ್ಷಾತೀತವಾಗಿ ರೈತರ ಮೂಲಕ ಮನವಿ ಪತ್ರ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. 

ಕರ್ನಾಟಕ ರಾಜ್ಯದಲ್ಲಿ 1100 ‘ರೈತ ಮಿತ್ರ ಸ್ವಯಂ ಸೇವಕರ ಸಂಘ’ಗಳನ್ನು ರಚಿಸುವ ಮೂಲಕ 30 ಸಾವಿರ ರೈತರ ಬೈಕ್‌ಗಳಿಗೆ ‘ಮಣ್ಣು ಉಳಿಸಿ-ಅನ್ನದಾತನಿಗೆ ಮೊದಲ ಆದ್ಯತೆ ನೀಡಿ’ ಎಂಬ ಸಂದೇಶವಿರುವ ಬಾವುಟ ಹಾಕಿ, ಅವರ ಮೂಲಕ ಗ್ರಾಮ ಮಟ್ಟದಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಪ್ರಾರಂಭಿಸಿದ್ದಾರೆ. ಈ ಚಳುವಳಿಯ ಮೂಲಕ ಕರ್ನಾಟಕ ರಾಜ್ಯದ ಎಲ್ಲ ವಿಧಾನಸಭಾ ಹಾಗೂ ಲೋಕಸಭಾ ಮತಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದ ಮತ್ತು ಸೋತ ಅಭ್ಯರ್ಥಿಗಳಿಗೆ ಮನವಿ ಪತ್ರ ಸಲ್ಲಿಸಿತ್ತಾ ಪ್ರತಿ ಮತಕ್ಷೇತ್ರ ಮಟ್ಟದಲ್ಲಿ ರೈತ ಸಂಘಟನೆ ಬಲಪಡಿಸುವ ಮೂಲಕ ರೈತರಿಗೆ ಪೂರಕವಾದ ಕಾನೂನುಗಳು ಅನುಷ್ಠಾನಗೊಳ್ಳುವವಂತೆ ಮಾಡುವ ಉದ್ದೇಶ ಹೊಂದಿದ್ದಾರೆ.