ನಂದಿ ಸೇವಾ

 ಪ್ರೋತ್ಸಾಹ ಧನ

 ವಿತರಣೆ




ಜೋಡೆತ್ತು ಸಾಕಾಣಿಕೆದಾರರಿಗೆ ಪ್ರೋತ್ಸಾಹ ಧನ ನೀಡುವುದರಿಂದ ಆಗುವ ಲಾಭಗಳು


೧. ಆಯಾ ಭಾಗದ ದೇಸಿ ಹಸುಗಳನ್ನು ಕೇವಲ ಹಾಲು ಉತ್ಪಾದನೆಗಾಗಿ ಸಾಕಾಣಿಕೆ ಮಾಡುವ ಬದಲು ಒಳ್ಳೆಯ ಹೋರಿಗಳನ್ನು ಪಡೆಯಲು ಸಾಕಾಣಿಕೆ ಮಾಡುವ ರೈತರ ಸಂಖ್ಯೆ ಹೆಚ್ಚಾಗುವುದು. ಇದರಿಂದ ದೇಸಿ ಹಸುಗಳನ್ನು ಸಂರಕ್ಷಣೆ ಮಾಡಲು ಸಾಧ್ಯವಾಗುವುದು. 

೨. ಹೋರಿ ಕರುಗಳು ಕಾಸಾಯಿಖಾನೆಯ ಪಾಲಾಗುತ್ತಿರುವುದನ್ನು ತಡೆಯಬಹುದು.

೩. ಎತ್ತು ಆಧಾರಿತ ಕೃಷಿ ಮಾಡಲು ಯುವ ರೈತರು ಆಸಕ್ತಿ ತೋರಿಸಬಹುದು.

೪. ಯಂತ್ರ ಚಾಲಿತ ಕೃಷಿ ನಿಯಂತ್ರಣವಾಗಿ ಭೂಮಿಯ ಫಲವತ್ತತೆ ಹೆಚ್ಚಾಗುವುದು.

೫. ಎತ್ತುಗಳಿಗೆ ಸಂಬAಧಿಸಿದ ಉಪಕಸಬುಗಳಾದ ಬಡಿಗತನ, ಕಂಬಾರಿಕೆ, ಕಮ್ಮಾರಿಕೆ ಹಾಗೂ ಇತರ ಕುಟಿರ ಉದ್ಯೋಗಗಳು ನಾಶವಾಗದಂತೆ ತಡೆಯಬಹುದು.

೬. ನಾಶವಗುತ್ತಿರುವ ಬಹುಬೆಳೆ ಕೃಷಿ ಪದ್ಧತಿ ಮರಳಿ ಪುನಶ್ಚೇತನ ಗೊಳ್ಳುವುದು.

೭. ಮಣ್ಣಿನ ಫಲವತ್ತತೆಯನ್ನು ದೀರ್ಘಕಾಲೀನ ವರೆಗೆ ಉಳಿಸಿ ಬೆಳೆಸಬಹುದು.

೮. ಸಾವಯವ ಕೃಷಿಯ ಮೂಲ ಆಧಾರ ಸ್ತಂಭವೇ ಎತ್ತುಗಳು ಎಂಬುದರ ಕುರಿತು ಜನರಿಗೆ ಸರಳವಾಗಿ ಅರಿವು ಮೂಡಿಸಬಹುದು. 

೯. ಸಾವಯವ ಆಹಾರ ಪದಾರ್ಥಗಳ ಲಭ್ಯತೆ ಹೆಚ್ಚಾಗುವುದು.

೧೦. ಮಣ್ಣಿನಲ್ಲಿ ಎತ್ತುಗಳ ತ್ಯಾಜ್ಯ ಸೇರುವುದರಿಂದ ಮಣ್ಣಿನ ತೇವಾಂಶವನ್ನು ದೀರ್ಘಕಾಲೀನದ ವರೆಗೆ ಕಾಪಾಡಿಕೊಳ್ಳಬಹುದು.

೧೧. ಎತ್ತು ಮತ್ತು ಗೋವುಗಳು ಉಳಿದರೆ ಮಣ್ಣು ಉಳಿಯುವುದು, ಮಣ್ಣು ಉಳಿದರೆ ಮಾನವ ಉಳಿಯುವನು ಎಂಬ ವಿಚಾರ ಎಲ್ಲರಲ್ಲಿ ಮೂಡುವುದು.

೧೨. ಮುಂದಿನ ಪೀಳಿಗೆಗೆ ಆಹಾರ ಭದ್ರತೆ ಒದಗಿಸಲು ಸಾಧ್ಯವಾಗುವುದು.