ರೈತ ಮಿತ್ರ ಸ್ವಯಂ ಸೇವಕರ ಸಂಘಗಳ ಸ್ಥಾಪನೆ



ರೈತ ಮಿತ್ರ ಸ್ವಯಂ ಸೇವಕರ ಸಂಘಗಳ ಸ್ಥಾಪನೆ


ಕಳೆದ ಕೆಲವು ವರ್ಷಗಳ ಹಿಂದೆ ರೈತ ಸಮುದಾಯದಲ್ಲಿದ್ದ ಸಹಕಾರ ಮನೋಭಾವನೆ ನಶಿಸುತ್ತಾ ಇಂದು ರೈತರು ಒಬ್ಬಂಟಿಯಾಗಿ ಎಲ್ಲ ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶತಮಾನದ ಹಿಂದೆ ಡೋಗಿ ಬರ, ಸಜ್ಜೆ ಬರ ಹೀಗೆ ಹಲವು ಬರಗಾಲಗಳು ಬಂದು ಒಂದು ಹೊತ್ತಿನ ಊಟಕ್ಕೆ ಕೊರತೆ ಇದ್ದರೂ ಸಹ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡುತ್ತಿರಲಿಲ್ಲ. ಆದರೆ, ಇಂದು ರೈತರಿಗೆ ಮೂರು ಹೊತ್ತಿನ ಆಹಾರಕ್ಕೆ  ಕೊರತೆ ಇರದೇ ಇದ್ದರೂ ಸಹ ಹಲವು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣವೇ ರೈತರನ್ನು ಒಡೆದು ಆಳುವ ಬ್ರಿಟೀಷ್ ಶಿಕ್ಷಣ ಪದ್ಧತಿ ಹಾಗೂ ರಾಜಕೀಯ ವ್ಯವಸ್ಥೆ ನಮ್ಮ ದೇಶದಲ್ಲಿ ಉಳಿದಿರುವುದಾಗಿದೆ.

ಇಂದು ಭಾರತೀಯ ರೈತರು ತಮ್ಮ ಪೂರ್ವಜರ ಅನುಸರಿಸಿದ ಕೃಷಿ ಸಂಸ್ಕೃತಿಯನ್ನು ಪರಿಚಯ ಮಾಡಿಕೊಂಡು ಮರಳಿ ಕೃಷಿಕರು ಅನ್ಯೋನ್ಯತೆಯಿಂದ ಬದುಕು ಕಟ್ಟಿಕೊಳ್ಳುವ ವಾತಾವರಣ ನಿರ್ಮಿಸಬೇಕಾಗಿದೆ. ಹಾಗಾಗಿ, ಈಗಾಗಲೇ ನಮ್ಮ ಋಷಿಗಳ ಜ್ಞಾನದ ಬಲದಿಂದ ನಿರ್ಮಿತವಾದ ಮಠ, ಮಂದಿರ ಹಾಗೂ ಆಶ್ರಮಗಳ ಆಧಾರಿತವಾಗಿ ಸಮಾನ ಮನಸ್ಕ ರೈತ ಮಿತ್ರ ಸ್ವಯಂ ಸೇವಕರ ಸಂಘಗಳನ್ನು ರಚಿಸುವ ಅವಶ್ಯಕತೆಯಿದೆ. ರಾಷ್ಟಾçಭಿಮಾನ ಬೆಳೆಯಲು ಸ್ವಯಂ ಸೇವಕ ಸಂಘಗಳು ಇರುವಂತೆ ರೈತಾಭಿಮಾನ ಬೆಳೆಯಲು ಸ್ವಯಂ ಸೇವಕ ಸಂಘಗಳ ಸ್ಥಾಪನೆಯನ್ನು ರಾಷ್ಟ್ರಾದ್ಯಂತ ಮಾಡುವ ಅವಶ್ಯಕತೆಯಿದೆ. 

ಭಾರತ ದೇಶದ ಬೆನ್ನೆಲುಬಾದ ರೈತರ ಕುರಿತು ಅಭಿಮಾನ ಇರದೇ ಇದ್ದರೆ ನಮ್ಮ ರಾಷ್ಟ್ರಾಭಿಮಾನಕ್ಕೆ ಯಾವ ಅರ್ಥವೂ ಕೂಡ ಇರುವುದಿಲ್ಲ.  ನಮ್ಮಲ್ಲಿರುವ ರೈತಾಭಿಮಾನವೇ ರಾಷ್ಟ್ರಾಭಿಮಾನವಾಗಿದೆ. ಏಕೆಂದರೆ, ಭಾರತ ದೇಶದಲ್ಲಿ ರೈತರ ಅವನತಿ ಆಗುವುದೆಂದರೆ ಸರ್ವರ ಅವನತಿ ಆಗುವುದು ಎಂದು ಅರ್ಥ. ಇಂದು ತಮ್ಮ ಮಗ ರೈತನಾಗಿರುವನು ಎಂದು ಆಭಿಮಾನದಿಂದ ಹೇಳುವ ಬೆರಳೆಣಿಕೆಯಷ್ಟು ಜನರೂ ಕೂಡ ಸಿಗುವುದಿಲ್ಲ. ತಮ್ಮ ಮಗಳನ್ನು ರೈತನಿಗೆ ಮದುವೆ ಮಾಡಿ ಕೊಡುವೆ ಎಂದು ಅಭಿಮಾನದಿಂದ ಹೇಳುವ ತಂದೆ-ತಾಯಿಯAದಿರು ಸಿಗುವುದು ಅತ್ಯಂತ ಅಪರೂಪ. ಇದು ಭಾರತೀಯ ರೈತ ಸಮುದಾಯ ಅವನತಿ ಹೊಂದುತ್ತಿರುವುದರ ಮುನ್ಸೂಚನೆಯಾಗಿದೆ. ಇಂತಹ ಸಂದರ್ಭದಲ್ಲಿ ರೈತಾಭಿಮಾನವನ್ನು ಹುಟ್ಟು ಹಾಕುವ ಹಲವು ರೈತ ಮಿತ್ರ ಸ್ವಯಂ ಸೇವಕ ಸಂಘಗಳನ್ನು ರಚಿಸುವ ಅವಶ್ಯಕತೆ ಬಂದೊದಗಿದೆ. ಭಾರತೀಯ ರೈತರು ನೆಮ್ಮದಿಯಾಗಿ ಇದ್ದರೆ ಮಾತ್ರ ರಾಷ್ಟ್ರದ ಇತರ ಎಲ್ಲ ಜನರೂ ನೆಮ್ಮದಿಯಿಂದ ಇರಲು ಸಾಧ್ಯ ಎಂಬುದರ ಕುರಿತು ಎಲ್ಲ ಜನರಿಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ರೈತ ಮಿತ್ರ ಸ್ವಯಂ ಸೇವಕ ಸಂಘಗಳು ರಚನೆ ಆಗಬೇಕಿದೆ.

‘ಅನ್ನದಾತನಿಗೆ ಮೊದಲ ಆದ್ಯತೆ ನೀಡಿ” ಎಂಬ ಸಂದೇಶದ ಮಹತ್ವವನ್ನು ಪ್ರತಿಯೊಬ್ಬ ಮತದಾರರಿಗೆ ಮನವರಿಕೆ ಮಾಡಿಕೊಟ್ಟು ರೈತರಿಗೆ ಪೂರಕವಾದ ಕಾನೂನುಗಳು ಹಾಗೂ ಯೋಜನೆಗಳನ್ನು ಜಾರಿಗೆ ತರುವ ಇಚ್ಚಾಶಕ್ತಿ ಇರುವ ನಾಯಕರು ಚುನಾವಣೆಗಳಲ್ಲಿ ಆಯ್ಕೆಯಾಗುವ ವಾತಾವರಣ ನಿರ್ಮಿಸುವುದು ರೈತ ಮಿತ್ರ ಸ್ವಯಂ ಸೇವಕರ ಜವಾಬ್ದಾರಿಯಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದಾದರೂ ಸಾಮಾಜಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸೂಕ್ತ ಸಮಯವೇ ಚುನಾವಣೆ ಸಮಯವಾಗಿದೆ. ಹಾಗಾಗಿ, ಗ್ರಾಮ ಮಟ್ಟದಿಂದ ಲೋಕ ಸಭೆಯವರೆಗಿನ ಎಲ್ಲ ಚುನಾವಣೆ ಪ್ರಣಾಳಿಕೆಗಳ ಮುಖ್ಯ ವಿಷಯ ರೈತರ ಬೇಡಿಕೆಯ ವಿಷಯವಾಗುವಂತೆ ವಾತಾವರಣ ನಿರ್ಮಿಸಬೇಕಾಗಿದೆ. ಈ ಕಾರಣಕ್ಕಾಗಿ, ಮಣ್ಣು ಉಳಿಸಿ ಅಭಿಯಾನದಲ್ಲಿ ಸಕ್ರೀಯವಾಗಿ ಭಾಗವಹಿಸಿದ ಸ್ವಯಂ ಸೇವಕರು ಕರ್ನಾಟಕ ರಾಜ್ಯದ ಪ್ರತಿ ವಿಧಾನ ಸಭಾ ಮತಕ್ಷೇತ್ರದಲ್ಲಿರುವ ಪ್ರಮುಖ ಶಕ್ತಿ ಕೇಂದ್ರಗಳ ಆಧಾರಿತವಾಗಿ ಕನಿಷ್ಠ ಐದು ‘ರೈತ ಮಿತ್ರ ಸ್ವಯಂ ಸೇವಕರ ಸಂಘ’ಗಳನ್ನು ಸ್ಥಾಪಿಸುವ ಯೋಜನೆ ಹೊಂದಿದ್ದಾರೆೆ, ಈ ಮೂಲಕ ಕರ್ನಾಟಕ ರಾಜ್ಯಾದ್ಯಂತÀ ೧೧೦೦ ರೈತ ಮಿತ್ರ ಸ್ವಯಂ ಸೇವಕರ ಸಂಘಗಳನ್ನು ರಚಿಸಿ ಒಟ್ಟು ೩೦೦೦೦ ರೈತ ಮಿತ್ರರ ಬೈಕ್ ಗಳಿಗೆ  “ಅನ್ನದಾತರಿಗೆ ಮೊದಲ ಆದ್ಯತೆ ನೀಡಿ” ಎಂಬ ಘೋಷವಾಕ್ಯವಿರುವ ಬಾವುಟ ಹಾಕಿ ಜನ ಜಾಗೃತಿ ಮೂಡಿಸುವ ಯೋಜನೆ ಹೊಂದಿದ್ದಾರೆ.


ರೈತ ಮಿತ್ರ ಸ್ವಯಂ ಸೇವಕರ ಸಂಘಗಳ ಸ್ಥಾಪನೆಯ ಮಾರ್ಗಸೂಚಿ


೧. ಮಣ್ಣನ್ನು ಉಳಿಸುವ ತುರ್ತು ಕುರಿತು ಜಾಗೃತಿ ಮೂಡಿಸಲು ಪ್ರತಿ ವಿಧಾನ ಸಭಾ ಮತಕ್ಷೇತ್ರದಲ್ಲಿರುವ ೫ ಪ್ರಮುಖ ಶಕ್ತಿ ಕೇಂದ್ರಗಳನ್ನು ಆಯ್ಕೇ ಮಾಡಿಕೊಳ್ಳುವುದು.

೨. ಪ್ರತಿಯೊಂದು ಶಕ್ತಿ ಕೇಂದ್ರದ ಆಧಾರಿತವಾಗಿ ರೈತ ಮಿತ್ರ ಸ್ವಂ ಸೇವಕರ ಸಂಘವನ್ನು ರಚನೆ ಮಾಡುವುದು. ಪ್ರತಿಯೊಂದು ಸ್ವಯಂ ಸೇವಕರ ಸಂಘದಲ್ಲಿ ೨೦-೪೦ ಸದಸ್ಯರು ಇರುವಂತೆ ನೋಡಿಕೊಳ್ಳುವುದು.

೩. ಪ್ರತಿ ರೈತ ಮಿತ್ರ ಸ್ವಯಂ ಸೇವಕರ ಗುಂಪಿಗೆ ಇಬ್ಬರು ‘ಸಂಪರ್ಕ ರೈತ ಮಿತ್ರ’ ರನ್ನು ಸಂಘದ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡುವುದು. 

೪. ಪ್ರತಿ ಮತ ಕ್ಷೇತ್ರಕ್ಕೆ ಒಬ್ಬ ಪ್ರತಿನಿಧಿಯನ್ನು 'ಕ್ಷೇತ್ರ ಮಟ್ಟದ ರೈತ ಸಂಪರ್ಕ ಮಿತ್ರ; ರನ್ನಾಗಿ ಆಯ್ಕೆ ಮಾಡುವುದು. ಇದೇ ರೀತಿ ಜಿಲ್ಲಾ ಮಟ್ಟದ ರೈತ ಸಂಪರ್ಕ ಮಿತ್ರರನ್ನು ಆಯ್ಕೆ ಮಾಡುವುದು.


ರೈತ ಮಿತ್ರ ಸ್ವಯಂ ಸೇವಕರ ಜವಾಬ್ದಾರಿಗಳು


೧. ದಿನಾಲು ವಾಟ್ಸಪ್ ಗ್ರೂಪ್ ನಿಂದ ಬರುವ ಜನಜಾಗೃತಿಯ ಸಂದೇಶಗಳನ್ನು ಸ್ಥಳೀಯ ವಾಟ್ಸಪ್ ಗ್ರೂಪ್ ಗಳಿಗೆ ಹಂಚಿಕೊಳ್ಳುವ ಮೂಲಕ ಜನಜಾಗೃತಿ ಮೂಡಿಸುವುದು.

೨. ಗ್ರಾಮಗಳಲ್ಲಿ ದನಕರುಗಳನ್ನು ಸಾಕಾಣಿಕೆ ಮಾಡುವ ಮತ್ತು ಗಿಡಮರಗಳ ಆಧಾರಿತ ಕೃಷಿ ಮಾಡುವ ರೈತರಿಗೆ ಭೇಟಿಯಾಗಿ "ಮಣ್ಣು ಪುನಶ್ಚೇತನ ಕಾನೂನು" ಅನುಷ್ಠಾನವಾದರೆ ದನಕರುಗಳ ಸಾಕಾಣಿಕೆದಾರರಿಗೆ ಮತ್ತು ಗಿಡಮರ ಬೆಳೆಸುವವರಿಗೆ ಹೆಚ್ಚು ಪ್ರೋತ್ಸಾಹ ಧನ ದೊರೆಯುವುದು ಎಂಬ ವಿಚಾರವನ್ನು ವಿವರಿಸಿ ಮಾಹಿತಿ ನೀಡುವುದು. 

೩. ಮಣ್ಣಿನ ಫಲವತ್ತತೆ ಆಧಾರದ ಮೇಲೆ ಸರ್ಕಾರ ಪ್ರೋತ್ಸಾಹ ಧನ ಕೊಡುವವರೆಗೆ ೩೦ ಸಾವಿರ ಬೈಕ್ ಗಳ ಮೇಲೆ ‘ಮಣ್ಣು ಉಳಿಸಿ-ಅನ್ನದಾತನಿಗೆ ಮೊದಲ ಆದ್ಯತೆ ನೀಡಿ’ ಸಂದೇಶವಿರುವ ಬಾವುಟ ಹಾಕಿ ಕರ್ನಾಟಕ ರಾಜ್ಯಾದ್ಯಂತ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿದ ವಿಷಯವನ್ನು ರೈತರಿಗೆ ತಿಳಿಸಿ, ಅವರ ಬೈಕ್‌ಗಳಿಗೂ ಬಾವುಟ ಹಾಕಿ ಜನಜಾಗೃತಿ ಮೂಡಿಸಲು ಪ್ರೇರೇಪಿಸುವುದು.

೪. ದನಕರುಗಳ ಸಮ್ಮುಖದಲ್ಲಿ "ಅನ್ನದಾತನಿಗೆ ಮೊದಲ ಆದ್ಯತೆ ನೀಡಿ" ಬ್ಯಾನರ್ ಅಥವಾ ಪೋಸ್ಟರ್ ಹಿಡಿದು ವಿಡಿಯೋ ಮತ್ತು ಫೋಟೋ ತೆಗೆದು ಕಳುಹಿಸುವುದು ಹಾಗೂ ರೈತರು ನೀಡಿದ ಅಭಿಪ್ರಾಯದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ  ಹಂಚಿಕೊಳ್ಳುವುದು ಕಳುಹಿಸಬಹುದು.

೫. ಸ್ಥಳೀಯವಾಗಿ ಇರುವ ಪ್ರಭಾವೀ ಧಾರ್ಮಿಕ ಸ್ಥಳಗಳಲ್ಲಿ ಹಲವು ರೈತರನ್ನು ಕರೆಯಿಸಿ ಅವರ ಬೈಕ್‌ಗಳಿಗೆ ‘ಮಣ್ಣು ಉಳಿಸಿ-ಅನ್ನದಾತನಿಗೆ ಮೊದಲ ಆದ್ಯತೆ ನೀಡಿ’ ಸಂದೇಶವಿರುವ ಬಾವುಟ ಹಾಕುವ ಸರಳ ಕಾರ್ಯಕ್ರಮ ಆಯೋಜನೆ ಮಾಡುವುದು.

೬. ವಿಧಾನಸಭಾ ಮತಕ್ಷೇತ್ರದ ಮಟ್ಟದಲ್ಲಿ ಕನಿಷ್ಠ ೧೦೦ ಜನರು ತಮ್ಮ ಬೈಕ್‌ಗಳ ಮೇಲೆ ಮಣ್ಣು ಉಳಿಸಿ ಬಾವುಟ ಹಾಕಿದ ನಂತರ ಎಲ್ಲರೂ ಬೈಕ್‌ಗಳ ಮೂಲಕ ಅಯಾ ಮತಕ್ಷೇತ್ರದ ಶಾಸಕರಿಗೆ ಭೇಟಿಯಾಗಿ ತಾವು ಬಾವುಟ ಹಾಕಿರುವ ಉದ್ದೇಶ ವಿವರಿಸಿ ಮನವಿ ಪತ್ರ ಸಲ್ಲಿಸುವುದು. ನಂತರ, ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಅಭ್ಯರ್ಥಿಗಳ ಮನೆಗೆ ಕೂಡ ತೆರಳಿ ಈ ಅಭಿಯಾನಕ್ಕೆ ಬೆಂಬಲ ನೀಡಲು ಮನವಿ ಪತ್ರದ ಮೂಲಕ ಕೋರಿಕೊಳ್ಳುವುದು.

೭. ಬೈಕ್‌ಗಳ ಮೇಲೆ ಬಾವುಟ ಹಾಕಿ ‘ರೈತ ಮಿತ್ರ’ ಎಂಬ ಸ್ವಯಂ ಸೇವಕರಾಗಿ ಜನಜಾಗೃತಿ ಮೂಡಿಸುವವರು ಇತರ ಪ್ರಮುಖ ಸ್ಥಳಗಳಲ್ಲಿ ಸಾಮೂಹಿಕವಾಗಿ ಹಲವು ಜನರ ಬೈಕ್‌ಗಳಿಗೆ ಬಾವುಟ ಹಾಕುವ ಕಾರ್ಯಕ್ರಮಗಳನ್ನು ಆಯೋಜಿಸಿ ರೈತ ಮಿತ್ರ ಎಂಬ ಸ್ವಯಂ ಸೇವಕರ ಸಂಖ್ಯೆಯನ್ನು ಹೆಚ್ಚು ಮಾಡುತ್ತಾ ಸಾಗುವುದು. 

೮. ಮುಂಬರುವ ವಿವಿಧ ಹಂತದ ಚುನಾವಣೆಗಳ ಸಮಯದಲ್ಲಿ ಪರಿಸರ ವಿಷಯವು ಹೆಚ್ಚು ಚರ್ಚೆಗೆ ಒಳಪಡುವ ವಿಷಯವನ್ನಾಗಿಸುವುದು ರೈತ ಮಿತ್ರರ ಗುರಿಯಾಗಬೇಕು. 

೯. ರಾಜ್ಯ ಮತ್ತು ಕೇಂದ್ರ ಸರ್ಕಾರ, ಎರಡಕ್ಕೂ ಕೂಡ ಮಣ್ಣು ಉಳಿಸಿ ಅಭಿಯಾನದ ಮೂಲಕ  "ಮಣ್ಣು ಪುನಶ್ಚೇತನ ಕಾನೂನು" ಸಲ್ಲಿಸಲಾಗಿದೆ, ಆದಕಾರಣ ಎರಡೂ ಸರ್ಕಾರದ ಜನಪ್ರತಿನಿಧಿಗಳಿಗೆ ಮನವಿ ಪತ್ರ ಸಲ್ಲಿಸಿ ಕನಿಷ್ಠ ೧೫ ವರ್ಷಗಳ ವರೆಗೆ ಪ್ರತಿ ವರ್ಷ ಒಟ್ಟು ಬಡ್ಜೆಟ್‌ನ ೨೫ ಪ್ರತಿಶತ ಹಣವನ್ನು ಮಣ್ಣು ಪುನಶ್ಚೇತನ ಕಾನೂನು ಅನುಷ್ಠಾನಕ್ಕೆ ಮೀಸಲಿಡುವಂತೆ ಹೊಸ ಕಾನೂನು ರೂಪಿಸಲು ಬೇಡಿಕೆ ಸಲ್ಲಿಸುವುದು ಹಾಗು ಅದನ್ನು ಸಾಧ್ಯವಾಗಿಸುವುದು ರೈತ ಮಿತ್ರರ ದೃಢ ಸಂಕಲ್ಪ ಮತ್ತು ಒಟ್ಟಾರೆ ಗುರಿಯಾಗಬೇಕಾದ ಅವಶ್ಯಕತೆಯಿದೆ. 

೧೦. ರೈತ ಮಿತ್ರರು ಮೇಲಿನ ಗುರಿ ತಲುಪುವವರೆಗೆ ತಮ್ಮ ಜನಜಾಗೃತಿ ಮೂಡಿಸುವ ಕಾರ್ಯವನ್ನು ಸ್ಥಳೀಯ ಮಟ್ಟದಲ್ಲಿ ಮುಂದುವರೆಸುವುದು. ಕಾಲಕಾಲಕ್ಕೆ ರೂಪಿಸುವ ಹೊಸ ಕಾರ್ಯಕ್ರಮಗಳಿಗೆ ಸ್ಪಂದಿಸುತ್ತಾ ಸಾಗಿ ನಿರ್ಧರಿಸಿದ ಗುರಿ ತಲುಪುವುದು ಎಲ್ಲ ರೈತ ಮಿತ್ರರ ಉದ್ದೇಶವಾಗಿದೆ.


ಸಂಪರ್ಕ ಮಿತ್ರರ ಜವಾಬ್ದಾರಿಗಳು


೧. ಮಣ್ಣು ಮಿತ್ರ ಸ್ವಯಂ ಸೇವಕರ ಸಂಘದ ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ಪ್ರಾರಂಭಿಸುವುದು.

೨. ಸಂಘದ ಎಲ್ಲ ಸದಸ್ಯರನ್ನು ಆಡ್ಮಿನ್ ಮಾಡುವುದು ಹಾಗೂ ಎಲ್ಲರ ಸಂಪರ್ಕಕ್ಕೆ ಬರುವ ಜನರನ್ನು ಗ್ರೂಪ್ ಗೆ ಸೇರಿಸವುದು ಹಾಗೂ ಸಂಘದ ಸದಸ್ಯರಿಗೂ ಕೂಡ ತಿಳಿಸುವುದು.

೩. ಜಿಲ್ಲಾ ಮಟ್ಟದ ವಾಟ್ಸಪ್ ಗ್ರೂಪ್ ನಲ್ಲಿ ದಿನಾಲು ಕಳುಹಿಸುವ ಮಾಹಿತಿಯನ್ನು ಸಂಘದ ಗ್ರೂಪ್ ಗೆ ಹಂಚಿಕೊಳ್ಳುವುದು.

೪. ಸಂಘದ ಸದಸ್ಯರ ಬೈಕ್ ಗಳ ಮೇಲೆ ಹಾಕಿದ ಬಾವುಟ ಇರುವುದನ್ನು ಖಾತ್ರಿ ಪಡಿಸಿಕೊಳ್ಳುವುದು.

೫. ಕಾಲಕಾಲಕ್ಕೆ ಸಂಪರ್ಕ ಮಿತ್ರರಿಗೆ ಆಯೋಜಿಸುವ ತರಬೇತಿಗಳಿಗೆ ಹಾಜರಾಗುವುದು.

೬. ಮತಕ್ಷೇತ್ರದ ಶಾಸಕರು ಹಾಗೂ ವಿಧಾನಸಭೆ ಚುನುವಾಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಮನವಿ ಪತ್ರ ಸಲ್ಲಿಸುವ ಸಮಯದಲ್ಲಿ ಸಂಘದ ಎಲ್ಲ ಸದಸ್ಯರೊಂದಿಗೆ ಪಾಲ್ಗೊಳ್ಳುವುದು.