ದೂರದೃಷ್ಟಿಯ ನಾಯಕತ್ವ ಅಭಿವೃದ್ಧಿ
ನಾಯಕತ್ವ ಅಭಿವೃದ್ಧಿಯ ಕುರಿತು ಬಸವರಾಜ ಬಿರಾದಾರ ಅವರು ಬರೆದ ಅಭೀಃ ಪುಸ್ತಕ ಪಡೆಯಲು ಸಂಪರ್ಕಿಸಿ: 9110885321
ಬಸವರಾಜ ಎನ್. ಬಿರಾದಾರ
ಆಧ್ಯಾತ್ಮಿಕ ಚಿಂತಕರು ಮತ್ತು ನಂದಿ ಕೃಷಿ ತಜ್ಙರು
ಮೊಬೈಲ್ ಸಂಖ್ಯೆ: 9449303880
ಇಮೇಲ್: bnbiradar3193@yahoo.co.in
ಬಸವರಾಜ ಬಿರಾದಾರ ಅವರು ಕಾಲೇಜು ವಿದ್ಯಾಭ್ಯಾಸ ಮಾಡುವಾಗ ಸತತ ೩ ವರ್ಷಗಳ ಕಾಲ ವಿದ್ಯಾರ್ಥಿ ಸಂಘದ ನಾಯಕರಾಗಿ ಕೆಲಸ ಮಾಡುವುದರ ಜೊತೆಗೆ M.Sc.(Agri.) ಯಲ್ಲಿ ಗೋಲ್ಡ್ ಮೆಡಲ್ ಪಡೆದು ಉತ್ತೀರ್ಣರಾಗಿದ್ದಾರೆ. ಮೂರು ವರ್ಷಗಳ ಕಾಲ ಪ್ರೈವೆಟ್ ಕಂಪನಿಯಲ್ಲಿ ಸಿ.ಎಸ್.ಅರ್. ಅಧಿಕಾರಿಯಾಗಿ ಮತ್ತು ೧೦ ವರ್ಷ ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಗುರು ಅವರು ಪ್ರಾರಂಭಿಸಿದ ‘ಮಣ್ಣು ಉಳಿಸಿ’ ಅಭಿಯಾನದಿಂದ ಸ್ಪೂರ್ತಿ ಪಡೆದು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ “ಪರಿಸರ ಹಾಗೂ ರೈತರ ಸಮಸ್ಯೆಗಳು ರಾಜಕೀಯ ಸಮಸ್ಯೆಗಳನ್ನಾಗಿಸÀಬೇಕು” ಎಂಬ ಉದ್ದೇಶದಿಂದ ‘ಅಭೀಃ ಫೌಂಡೇಶನ್’ ಎಂಬ ಸರ್ಕಾರೇತರ ಸಂಸ್ಥೆಯನ್ನು ಪ್ರಾರಂಭಿಸಿ ‘ಋಷಿ-ಕೃಷಿ ಸಂಸ್ಕೃತಿ ಪುನಶ್ಚೇತನ’ ಎಂಬ ಯೋಜನೆಯಡಿ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ದೂರದೃಷ್ಟಿಯ ನಾಯಕತ್ವ ಅಭಿವೃದ್ದಿಯ ಉದ್ದೇಶದಿಂದ ‘ಓಂ ಲೀಡರಶಿಪ್ ಅಕಾಡೆಮಿ’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ವಿವಿಧ ಸಂಘ-ಸAಸ್ಥೆಗಳ ಮುಖ್ಯಸ್ಥರು ಹಾಗೂ ಉದ್ಯೋಗಿಗಳಿಗೆ ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಮುಂದಿನ ದಿನಮಾನಗಳಿಗೆ ಅವಶ್ಯವಿರುವÀ ಸಮರ್ಥ ನಾಯಕರನ್ನು ತಯಾರಿ ಮಾಡುತ್ತಿದ್ದಾರೆ. ನಾಯಕತ್ವದ ಕುರಿತು 'ಅಭೀಃ, ಯೋಗ ಸಾಧನಗಳ ಮಹತ್ವದ ಕುರಿತು 'ಸಾಧ್ಯತೆ’, ಪ್ರಕೃತಿಯ ಮಹತ್ವದ ಕುರಿತು 'ಉಸಿರು ಹಾಗೂ ಭಾರತೀಯ ಆಧ್ಯಾತ್ಮಿಕ ನಾಯಕರ ಹಾದಿಯಲ್ಲಿ ನಡೆಯುವುದರ ಮಹತ್ವದ ಕುರಿತು ‘ನಡೆ ನಮನ’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ನಂದಿ ಕೃಷಿ ಪುನಶ್ಚೇತನದ ಕುರಿತು ರೈತ ರಾಜಕೀಯ, ರಾಜಕೀಯ ಭವಿಷ್ಯ, ಬಸವ ರಾಜಕೀಯ ಹಾಗೂ ಪ್ರಕೃತಿ ರಾಜಕೀಯ ಎಂಬ ಪುಸ್ತಕಗಳನ್ನು ಬರೆದಿದ್ದಾರೆ.
ಸದ್ಗುರು ಅವರು ಜಗತ್ತಿನಾದ್ಯಂತ ಪ್ರಾರಂಭಿಸಿದ ‘ಮಣ್ಣು ಉಳಿಸಿ’ ಅಭಿಯಾನದಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಏಕಾಂಗಿಯಾಗಿ ಉತ್ತರ ಕರ್ನಾಟಕದಾದ್ಯಂತ ಬೈಕ್ ಮೇಲೆ ಪ್ರಯಾಣಿಸಿ ಜನರಿಗೆ ಅಭಿಯಾನದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಕೇವಲ 28 ದಿನಗಳಲ್ಲಿ 3000 ಕಿಲೋಮೀಟರ್ ಬೈಕ್ ಮೇಲೆ ಪ್ರಯಾಣಿಸಿ 155 ಕ್ಕಿಂತ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರಿಗೆ ಮಣ್ಣಿನ ಕುರಿತು ಜಾಗೃತಿ ಮೂಡಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ರಾಜ್ಯ ಮಟ್ಟದ ‘ನಡೆ ನಮನ’ ಎಂಬ ಅಭಿಯಾನ ಆಯೋಜಿಸಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ರೈತರಿಗೆ ವರದಾನವಾಗುವ ‘ಮಣ್ಣು ಪುನಶ್ಚೇತನ ಕಾನೂನು’ ಜಾರಿಗಾಗಿ ಪಕ್ಷಾತೀತವಾಗಿ ರೈತರ ಮೂಲಕ ಮನವಿ ಪತ್ರ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ.
ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಆಶಯದಂತೆ ಜೋಡೆತ್ತುಗಳ ಸಂತತಿ ಉಳಿಸುವ ಉದ್ದೇಶದಿಂದ ನಂದಿ ಯಾತ್ರೆ ಎಂಬ ಅಭಿಯಾನ ಪ್ರಾರಂಭಿಸಿದ್ದಾರೆ. ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಜನ್ಮ ಸ್ಥಳವಾದ ಬಿಜ್ಜರಗಿ ಗ್ರಾಮದಲ್ಲಿರುವ ಅವರ ಪೂರ್ವಾಶ್ರಮ ಮನೆಯಿಂದ ಜೋಡೆತ್ತುಗಳ ಬಂಡಿಗಳ ನಂದಿ ಯಾತ್ರೆ ಪ್ರಾರಂಭಿಸಿ ವಿಜಯಪುರ ಜಿಲ್ಲೆಯ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಿಗೆ ಸಂಚರಿಸಿ ಜನಜಾಗೃತಿ ಮೂಡಿಸಿದ್ದಾರೆ. ಜಿಲ್ಲೆಯ ಪ್ತಮುಖ ೪೦ ಆಧ್ಯಾತ್ಮಿಕ ಸ್ಥಳಗಳಲ್ಲಿ ಜೋಡೆತ್ತಿನ ರೈತರ “ರೈತ ಮಿತ್ರ ಸ್ವಯಂ ಸೇವಕರ ಸಂಘ” ಗಳನ್ನು ಸ್ಥಾಪಿಸಿದ್ದಾರೆ. ಮುಂದುವರೆದು, ಕರ್ನಾಟಕ ರಾಜ್ಯದ ಎಲ್ಲ ಜೋಡೆತ್ತಿನ ರೈತರನ್ನು ಸಂಘಟಿಸಿ ಜೋಡೆತ್ತಿನ ಕೃಷಿ ಪುನಶ್ಚೇತನಗೊಳಿಸುವ ಉದ್ದೇಶದಿಂದ ನಂದಿ ಕೃಷಿ ಪುನಶ್ಚೇತನದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಾಗಿದ್ದಾರೆ.
ದೂರದೃಷ್ಟಿ ನಾಯಕತ್ವ ಅಭಿವೃದ್ದಿಯ ಕಾರ್ಯಾಗಾರಗಳು
ಓದಿ ಮುಂದಾಳತ್ವ ವಹಿಸಿ ಆಂದೋಲನ