ನಂದಿ ಸಮಾವೇಶ ಹಾಗೂ ಸಮ್ಮೇಳನಗಳು

ಪತ್ರಿಕಾ ಪ್ರಕಟಣೆ  ಕೃಪಗಾಗಿ 

ಮಹಾಶಿವರಾತ್ರಿಯ ದಿನದಂದು ಜೋಡೆತ್ತಿನ ರೈತರ ಪ್ರಥಮ ಸಮ್ಮೇಳನ 


ಶ್ರೀ ಸಿದ್ದೇಶ್ವರ ಸ್ವಾಮೀಜಜಿಯವರ ಆಶಯದಂತೆ ನಾಶವಾಗುತ್ತಿರುವ ಶಿವನ ವಾಹನವಾದ ನಂದಿಯನ್ನು ಉಳಿಸುವ ಸಂದೇಶ ಸಾರಲು  ಜೊಡೆತ್ತಿನ ರೈತರ ಪ್ರಥಮ ಸಮ್ಮೇಳನ ಮಹಾಶಿವರಾತ್ರಿಯ ದಿನದಂದು ವಡವಡಗಿ ಗ್ರಾಮದ ಓಂ ಆಧ್ಯಾತ್ಮಿಕ‌ ಕೇಂದ್ರದಲ್ಲಿ ದಿನಾಂಕ: 8-03-2024 ರಂದು ಜರುಗಿತು.


ವಿವಿಧ ಗ್ರಾಮಗಳಿಂದ 96 ಎತ್ತಿನ ಬಂಡಿಗಳ ಮೂಲಕ ಆಗಮಿಸಿದ ಜೋಡೆತ್ತಿನ ರೈತರನ್ನು "ಶಿವನ ವಾಹನ ಪೋಷಕರು ಹಾಗೂ ಭವಿಷ್ಯದ ನಿರ್ಮಾತೃಗಳು" ಎಂದು ಗುರುತಿಸಿ ಸನ್ಮಾನಿಸಲಾಯಿತು. ನಂದಿ ಯಾತ್ರೆಯ ಮೂಲಕ ವಿಜಯಪುರ ಜಿಲ್ಲೆಯ ವಿವಿಧ ಆಧ್ಯಾತ್ಮಿಕ ಕೇಂದ್ರಗಳಿಗೆ   ಜೋಡೆತ್ತಿನ ಬಂಡಿಗಳ ಮೂಲಕ ಸಂಚರಿಸಿ ರೈತರನ್ನು ಸಂಘಟಿಸಿದ ಬಿಜ್ಜರಗಿ, ಕನಮಡಿ, ಬಾಬಾನಗರ ಹಾಗೂ ಯತ್ನಾಳ ಗ್ರಾಮದ ರೈತರಿಗೆ ನಂದಿ ವೀರ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ಸನ್ಮಾನಿತ ಎಲ್ಲ ರೈತರಿಗೆ ಸಂಪೂರ್ಣಾ ಸಾವಯವ ಕೃಷಿಯಲ್ಲಿ ಬೆಳೆದ ಜೋಳದ ಬೀಜ, ಬೆಲ್ಲ ಹಾಗೂ ಟಾರ್ಚ್ ಇರುವ ಕಿಟ್ ನೀಡಲಾಯಿತು.


ಕೃಷಿ ಉದ್ಯಮಿಗಳಾದ ಶ್ರೀ ಮಲ್ಲಿಕಾರ್ಜುನ ಕೋರಿಯವರು ಜೋಡೆತ್ತಿನ ರೈತರನ್ನು ಸನ್ಮಾನಿಸಿದರು. ಕೃಷಿ ಪದವೀಧರರಾದ ಇವರು ಕೇನ್ಯಾ ದೇಶದಲ್ಲಿ ತೀವ್ರ ಬರಗಾಲ ಉಂಟಾದ ಸಂದರ್ಭದಲ್ಲಿ 2000 ಗೋವುಗಳಿಗೆ 6 ತಿಂಗಳುಗಳ ಕಾಲ ಮೇವು ಹಾಗೂ ನೀರನ್ನು ನೀಡಿ ಗೋವುಗಳ ಪೋಷಣೆ ಮಾಡಿ ಗೋಮಾತೆಯ ಕೃಪೆಗೆ ಪಾತ್ರರಾದ ವಿಶೇಷ ವ್ಯಕ್ತಿಯಾಗಿದ್ದಾರೆ. ಜೋಡೆತ್ತಿನ ರೈತರನ್ನು ಸನ್ಮಾನಿಸಿದ ಮಲ್ಲಿಕಾರ್ಜುನ ಕೋರಿ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ಎತ್ತುಗಳು ಉಳಿದರೆ ಮಾತ್ರ ನಮ್ಮ ಮಕ್ಕಳಿಗೆ ಗುಣಮಟ್ಬದ ಆಹಾರ ದೊರೆಯಲು ಸಾಧ್ಯವಿದೆ. ಅದಕ್ಕಾಗಿ ಬಹುಜನರಿಗೆ ಎತ್ತುಗಳ ಮಹತ್ವದ ಕುರಿತು ಅರಿವು ಮೂಡಿಸಲು ಮಹಾಶಿವರಾತ್ರಿಯ ದಿನದಂದು  ಶಿವನ ವಾಹನ ಉಳಿಸುವ ಸಂದೇಶ ರವಾನಿಸಲು ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ವಿಶೇಷವಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಅಭೀಃ ಫೌಂಡೇಶನ್ ಸಂಸ್ಥಾಪಕರಾದ ಬಸವರಾಜ ಬಿರಾದಾರ ಅವರು ಮಾತನಾಡಿ ಬರಗಾಲದ ಸಂದರ್ಭದಲ್ಲಿ ಎತ್ತುಗಳನ್ನು ಸಾಕಾಲಾಗದೇ ಮಾರಾಟ ಮಾಡುತ್ತಿರುವ ರೈತರ ನೆರವಿಗೆ ಹಣವಂತರು ಹಾಗೂ ವಿದ್ಯಾವಂತರು ಬಂದು ಎತ್ತುಗಳ ಅವರ ಮನೆಯಲ್ಲಿಯೇ ಉಳಿಯುವಂತೆ ನೋಡಿಕೊಳ್ಳಬೇಕಾಗಿದೆ. ನಮಗೆ ಶಿವ ಒಲಿಯಬೇಕಾದರೆ ಮೊದಲು ಅವನ ವಾಹನವಾದ ನಂದಿಯನ್ನು ಉಳಿಸಲು ಮುಂದಾಗಬೇಕಾದ ಅವಶ್ಯಕತೆ ಬಂದೊದಗಿದೆ ಎಂದು ತಿಳಿಸಿದರು.


ಓಂ ಆಧ್ಯಾತ್ಮಿಕ ಕೇಂದ್ರದಲ್ಲಿ ಕಳೆದ ವರ್ಷ ಮಹಾಶಿವರಾತ್ರಿಯ ದಿನದ ಜಾಗರಣೆಯ ಸಮಯದಲ್ಲಿ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರಕೃತಿ ಪ್ರೀತಿಯ ನೆನಪಿಗಾಗಿ ಆಲದ ಮರವನ್ನು ನೆಟ್ಟು ಕನಿಷ್ಠ 1000 ವರ್ಷ ಬದುಕುಳಿಯಬೇಕೆಂದು ಸಾಮೂಹಿಕವಾಗಿ ಸಂಕಲ್ಪ ಮಾಡಲಾಗಿತ್ತು.‌ ಹಾಗಾಗಿ, ಈ ಮಹಾಶಿವರಾತ್ರಿ ದಿನದಂದು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಶಿವಭಕ್ತರಿಗೆ ಈ ವಿಶೇಷ ಆಲದ ಮರದ ದರ್ಶನ ಪಡೆಯುವ ವ್ಯವಸ್ಥೆ ಮಾಡಲಾಗಿತ್ತು. ಇದರೊಂದಿಗೆ  ಜಗತ್ತಿನ ಅತೀ ದೊಡ್ಡ ಶಿವನ ಮುಖ ಹಾಗೂ ನಂದಿಯ ಮೂರ್ತಿಯನ್ನು ಪ್ರತಿಷ್ಟಾಪಿಸಿದ ಸದ್ಗುರು ಅವರು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯಿಸಿಕೊಡುವ ಮಹಾಶಿವರಾತ್ರಿ ಸತ್ಸಂಗದ ನೇರ ಪ್ರಸಾರವನ್ನು ದೊಡ್ಡ ಪರದೆಯ  ಆಯೋಜಿಸಲಾಗಿತ್ತು.


ಮಹಾಶಿವರಾತ್ರಿ ಕಾರ್ಯಕ್ರಮವು ಆನಂದ ಆಂದೇಲಿ, ಈರಣ್ಣ ಯಲಗೋಡ, ಬಸವರಾಜ ಗಂಗಶೆಟ್ಟಿ, ಶಿವಕುಮಾರ ಮನಹಳ್ಳಿ, ಪ್ರಭು ಗಂಗಶೆಟ್ಟಿ, ಸೋಮು ಸಜ್ಹನ ಹಾಗೂ ಬಸವರಾಜ ನಾಕೆತ್ತಿನ‌  ಇವರ ನೆತೃತ್ವದಲ್ಲಿ ಜರುಗಿತು.


Visit: missionsavesoil.comಜೋಡೆತ್ತುಗಳ‌ ಕೃಷಿ ಉಳಿಸಲು ಮುಂದಾಗುವ ಮೂಲಕ ಶ್ರೀಶೈಲ ಮಲ್ಲಯ್ಯನ ಕೃಪೆಗೆ ಪಾತ್ರರಾಗಬಹುದೇ? 


ಇಂದು ಪ್ರತಿ ಗ್ರಾಮಗಳಲ್ಲಿ ಜೋಡೆತ್ತಿನ ಕೃಷಿ ನಶಿಸಿ ಹೋಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಜೋಡೆತ್ತಿನ ಕೃಷಿ ನಶಿಸಿ ಹೋಗುತ್ತಿರುವುದರಿಂದ   ಗುಣಮಟ್ಟದ ಆಹಾರ ಕೊರತೆ ಎಲ್ಲ ಕಡೆ ಎದ್ದು ಕಾಣುತ್ತಿದೆ. ಗುಣಮಟ್ಟದ ಆಹಾರ ಕೊರತೆ ಇರುವ ಕಾರಣ, ಸಮಾಜದಲ್ಲಿ ಬಹುಜನರು ಹಲವು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ.  ನಂದಿ ಸಂಪತ್ತು ನಾಶವಾಗುತ್ತಾ ಹೋಗುತ್ತಿರುವುದು, ಮುಂದೆ ನಮ್ಮ ಮಕ್ಕಳು ಆಹಾರ ಕೊರತೆಯಿಂದ ನರಕಯಾತನೆ ಅನುಭವಿಸುವ ದಿನಗಳ ಮುನ್ಸೂಚನೆಯಾಗಿದೆ. 


ಬಯಲು ಸೀಮೆಯಲ್ಲಿ ಶುದ್ಧ ಹಾಗೂ ಗುಣಮಟ್ಟದ ಆಹಾರ ಉತ್ಪಾದನೆ ಮಾಡುವ ಶಕ್ತಿ ಜೋಡೆತ್ತಿನ ಕೃಷಿಗೆ ಮಾತ್ರವಿದೆ. ಈ‌ ಕಾರಣಕ್ಕಾಗಿ, ಜೋಡೆತ್ತುಗಳನ್ನು ರಕ್ಷಣೆ ಮಾಡಿದರೆ ಮಾತ್ರ ನಮಗೆ ಒಳ್ಳೆಯ ಭವಿಷ್ಯವಿದೆ ಎಂಬ ಸಂದೇಶ ನೀಡುವ ಉದ್ದೇಶದಿಂದ ಶ್ರೀಶೈಲ ಮಲ್ಲಯ್ಯನಿಗೆ ಕೊಂಡೊಯ್ಯುವ ಕಂಬಿಗಳ ಮೇಲೆ ನಂದಿಯ ಮೂರ್ತಿಗಳನ್ನು ನಮ್ಮ ಹಿಂದಿನ ಗುರುಗಳು ಸ್ಥಾಪಿಸಿದ್ದಾರೆ.  ನಾವು ಇಂದು ನಮ್ಮ ಕಣ್ಣು ಮುಂದೆ ನಡೆದಾಡುವ ನಂದಿಗಳನ್ನು ರಕ್ಷಿಸದೇ ನಂದಿ ಮೂರ್ತಿಗಳಿರುವ ಕಂಬಿಯನ್ನು ಶ್ರೀಶೈಲ ಮಲ್ಲಯ್ಯನವರೆಗೆ ಹೆಗಲ ಮೇಲೆ ಹೊತ್ತು ಹೋದರೂ ಸಹ, ಶ್ರೀಶೈಲ ಮಲ್ಲಯ್ಯ ನಮಗೆ ಒಲಿದು ನಮ್ಮನ್ನು ರಕ್ಷಿಸುವುದು ಬಹು ಕಷ್ಟ. ಏಕೆಂದರೆ, ಮಲ್ಲಯ್ಯ ತನ್ನ ವಾಹನವಾದ ನಂದಿಯನ್ನು ನಮ್ಮ ಜೀವನ ನಿರ್ಮಸಿಕೊಳ್ಳಲು ಕೊಟ್ಟಿದ್ದಾನೆ.‌ ನಂದಿ ಸಂಪತ್ತನ್ನೇ ಕಳೆದುಕೊಂಡು ಶ್ರೀಶೈಲ ಮಲ್ಲಯ್ಯನ ಹತ್ತಿರ ಹೋಗಿ ನಮ್ಮ ಗೋಳನ್ನು ಹೇಳಿದರೆ, ಮಲ್ಲಯ್ಯನಾದರೂ ಏನು ಮಾಡಲು ಸಾಧ್ಯ?. ಒಮ್ಮೆ ಎಲ್ಲರೂ ಯೋಚಿಸಬೇಕಾದ ಸಂಗತಿ ಇದಾಗಿದೆ.


ಜೋಡೆತ್ತುಗಳನ್ನು ಸಾಕುವ ಜನರ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣ, ಹೋರಿಕರುಗಳನ್ನು ಸಾಕಿ ಬೆಳೆಸಲು ರೈತರಿಗೆ ಸಾಧ್ಯವಾಗುತ್ತಿಲ್ಲ.‌ ಹಾಗಾಗಿ, ರೈತರು ಅನಿವಾರ್ಯವಾಗಿ ಹೋರಿಕರುಗಳನ್ನು ಮಾರಾಟ‌ ಮಾಡಿದಾಗ, ಅನೇಕ ಹೋರಿಕರುಗಳು ಕಾಸಾಯಿಖಾನೆಯ ಪಾಲಾಗುತ್ತಿವೆ. ಇದರಿಂದ, ದಿನಾಲು ಲಕ್ಷಾಂತರ ಹೋರಿಕರುಗಳು ಕಾಸಾಯಿಖಾನೆಯ ಪಾಲಾಗಿ ಮೂಕ ರೋಧನ ಅನುಭವಿಸಿ ಅಸುನೀಗುತ್ತಿವೆ. ಶ್ರಮವಹಿಸಿ ದುಡಿಯುವ ಜೋಡೆತ್ತಿನ ಕೃಷಿಕರಿಗೆ ಪೂರಕವಾದ ವ್ಯವಸ್ಥೆ ನಾಶವಾಗಿರುವುದೇ ನಂದಿಗಳ ನಾಶಕ್ಕೆ ಮೂಲ ಕಾರಣವಾಗಿದೆ. ಅದಕ್ಕಾಗಿ, ಜೋಡೆತ್ತಿನ ಕೃಷಿಕರ‌ ಮಹತ್ವವನ್ನು ಬಹುಜನರಿಗೆ ಪರಿಚಯಿಸುವ ಅವಶ್ಯಕತೆ ಬಂದೊದಗಿದೆ.


ಪ್ರತಿ ಗ್ರಾಮಗಳಲ್ಲಿರುವ ವಿದ್ಯಾವಂತರು ಹಾಗೂ ಹಣವಂತರು ಒಗ್ಗೂಡಿ ತಮ್ಮ ಗ್ರಾಮದ ನಂದಿ ಸಂಪತ್ತನ್ನು ಉಳಿಸಿಕೊಳ್ಳುವ ಕಾರ್ಯದಲ್ಲಿ ತೊಡಗುವ ಮೂಲಕ ಶ್ರೀಶೈಲ ಮಲ್ಲಯ್ಯ ಹಾಗೂ ಸಮಸ್ತ ದೇವಾನುತೇವತೆಗಳ ಕೃಪೆಗೆ ಪಾತ್ರರಾಗಬಹುದಾಗಿದೆ. ಈ ಕಾರಣಕ್ಕಾಗಿ, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆಶಯದಂತೆ ನಂದಿ ಸಂಪತ್ತು ಉಳಿಸುವ ಉದ್ದೇಶದಿಂದ‌ ಆಸಕ್ತ ಗ್ರಾಮಗಳಲ್ಲಿ ನಂದಿ ವನಮಹೋತ್ಸವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಓದುಗರು ತಮ್ಮ ಗ್ರಾಮದಲ್ಲಿ ನಂದಿ ವನಮಹೋತ್ಸವ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ತಮ್ಮ ಗ್ರಾಮದ ನಂದಿ ಸಂಪತ್ತನ್ನು ಉಳಿಸುವ ಕಾರ್ಯದಲ್ಲಿ ಮುಂದಾಗಬಹುದು. ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಲಿಂಕ್ ಮೂಲಕ ಪಡೆಯಬಹುದು.

https://www.missionsavesoil.com/%E0%B2%A8%E0%B2%A6-%E0%B2%B5%E0%B2%A8%E0%B2%AE%E0%B2%B9%E0%B2%A4%E0%B2%B8%E0%B2%B5


ಪ್ರೇರಣೆ: ಅಭೀಃ ಫೌಂಡೇಶನ್, ವಿಜಯಪುರ


 ಸಂಪರ್ಕಿಸಿ:


9901447325 / 8884390598 / 9900628834 / 9110885321


missionsavesoil.comಮಹಾಶಿವರಾತ್ರಿಯ ಜಾಗರಣೆ


ಅಂಗವಾಗಿ

ಜೋಡೆತ್ತಿನ ರೈತರ ಪ್ರಥಮ ಸರ್ವ ಜಾತಿ

    ಹಾಗೂ ಸರ್ವ ಧರ್ಮ‌ ಸಮ್ಮೇಳನ

------------------------------------------------------------------


        #  ಸಮ್ಮೇಳನದ ವಿಶೇಷತೆ # 

1. ಶ್ರೀ ಸಿದ್ದೇಶ್ವರ ಸ್ವಾಮೀಜಜಿಯವರ ಆಶಯದಂತೆ ನಾಶವಾಗುತ್ತಿರುವ ಶಿವನ ವಾಹನವಾದ ನಂದಿಯನ್ನು ಉಳಿಸುವ ಸಂದೇಶ ಸಾರಲು 108 ಜೊಡೆತ್ತುಗಳ ಸಮಾಗಮ ಮತ್ತು ಈ ಎಲ್ಲ ಜೋಡೆತ್ತಿನ ರೈತರನ್ನು "ಶಿವನ ವಾಹನ ಪೋಷಕರು ಹಾಗೂ ಭವಿಷ್ಯದ ನಿರ್ಮಾತೃಗಳು" ಎಂದು ಗುರುತಿಸುವ ವಿಶೇಷ ಸನ್ಮಾನ ಕಾರ್ಯಕ್ರಮ.


2. ನಂದಿ ಯಾತ್ರೆಯ ಮೂಲಕ ಜೋಡೆತ್ತಿನ ರೈತರನ್ನು ಸಂಘಟಿಸಿದ ರೈತರಿಗೆ ನಂದಿ ವೀರ ಬಿರುದು ನೀಡಿ ಗೌರವಿಸುವುದು.


 ಸನ್ಮಾನಿಸುವವರು: ಶ್ರೀ ಮಲ್ಲಿಕಾರ್ಜುನ ಕೋರಿ (ಯತ್ನಾಳ) -ಕೃಷಿ ಪದವೀಧರರಾದ ಇವರು ಕೇನ್ಯಾ ದೇಶದಲ್ಲಿ ತೀವ್ರ ಬರಗಾಲ ಉಂಟಾದ ಸಂದರ್ಭದಲ್ಲಿ 2000 ಗೋವುಗಳಿಗೆ 6 ತಿಂಗಳುಗಳ ಕಾಲ ಮೇವು ಹಾಗೂ ನೀರನ್ನು ಒದಗಿಸಿ ಗೋವುಗಳ ಪೋಷಣೆ ಮಾಡಿ ಗೋಮಾತೆಯ ಕೃಪೆಗೆ ಪಾತ್ರರಾದ ವಿಶೇಷ ವ್ಯಕ್ತಿಯಾಗಿದ್ದಾರೆ.


 ಸ್ಥಳ: ಓಂ ಆಧ್ಯಾತ್ಮಿಕ‌ ಕೇಂದ್ರ, ವಡವಡಗಿ, ಬಸವನ ಬಾಗೇವಾಡಿ ತಾಲೂಕು, ವಿಜಯಪುರ ಜಿಲ್ಲೆ.


 ದಿನಾಂಕ: 08-03-2024

 ಸಮಯ: ಸಾಯಂಕಾಲ 6 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ.


 ಕಾರ್ಯಕ್ರಮದ ವೈಶಿಷ್ಟ್ಯಗಳು


1. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಹೆಸರಿನಲ್ಲಿ ಬೆಳೆಸಿದ ಆಲದ ಮರದ ದರ್ಶನ: ಕಳೆದ ವರ್ಷ ಮಹಾಶಿವರಾತ್ರಿಯ ದಿನದ ಜಾಗರಣೆಯ ಸಮಯದಲ್ಲಿ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರಕೃತಿ ಪ್ರೀತಿಯ ನೆನಪಿಗಾಗಿ ಆಲದ ಮರವನ್ನು ನೆಟ್ಟು ಕನಿಷ್ಠ 1000 ವರ್ಷ ಬದುಕುಳಿಯಬೇಕೆಂದು ಸಾಮೂಹಿಕವಾಗಿ ಸಂಕಲ್ಪ ಮಾಡಲಾಗಿತ್ತು.‌  ಮಹಾಶಿವರಾತ್ರಿ ಕಾರ್ಯಕ್ರಮಕ್ಕೆ ಆಗಮಿಸುವ  ಎಲ್ಲ ಶಿವಭಕ್ತರು ಈ ವಿಶೇಷ ಆಲದ ಮರದ ದರ್ಶನದ ವ್ಯವಸ್ಥೆ.


2. ಸದ್ಗುರು ಅವರ ಮಹಾಶಿವರಾತ್ರಿ ಸತ್ಸಂಗ ಕಾರ್ಯಕ್ರಮದ‌ ನೇರ ಪ್ರಸಾರ: ಜಗತ್ತಿನ ಅತೀ ದೊಡ್ಡ ಶಿವನ ಮುಖ ಹಾಗೂ ನಂದಿಯ ಮೂರ್ತಿಯನ್ನು ಪ್ರತಿಷ್ಟಾಪಿಸಿದ ಸದ್ಗುರು ಅವರು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯಿಸಿಕೊಡುವ ಮಹಾಶಿವರಾತ್ರಿ ಸತ್ಸಂಗದ ನೇರ ಪ್ರಸಾರವನ್ನು ದೊಡ್ಡ ಪರದೆಯ ಮೇಲೆ ಸತತ ನಾಲ್ಕನೇ ವರ್ಷ ಆಯೋಜಿಸಲಾಗುತ್ತಿದೆ.  


3. ಇತರ ರೈತ ಸ್ನೇಹಿ ಕಾರ್ಯಕ್ರಮಗಳು: ಭಜನೆ, ಗೀಗಿ ಪದ, ಮಕ್ಕಳಿಂದ ನಾಟಕ ಹಾಗೂ ಗ್ರಾಮೀಣ ಪದಗಳು ಮತ್ತು ನೃತ್ಯಗಳು.


4. ಜೋಡೆತ್ತಿನ ರೈತರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ: ಪ್ರತಿ ಗ್ರಾಮಗಳಲ್ಲಿ ಎತ್ತುಗಳ ಸಂತತಿ ನಶಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಅದಕ್ಕಾಗಿ, ಜೋಡೆತ್ತು ಆಧಾರಿತ ಕೃಷಿ ಉಳಿದರೆ ಮಾತ್ರ ನಮ್ಮ ಮಕ್ಕಳಿಗೆ ಒಳ್ಳೆಯ ಭವಿಷ್ಯವಿದೆ ಎಂಬುದರ ಅರಿವು ಮೂಡಿಸುವ ಉದ್ದೇಶದಿಂದ ಮಹಾಶಿವರಾತ್ರಿಯ ದಿನದಂದು 108 ಜೋಡೆತ್ತಿನ ರೈತರಿಗೆ ಸನ್ಮಾನಿಸುವ ವಿಶೇಷ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ, ವಡವಡಗಿ ಗ್ರಾಮ ಹಾಗೂ ಹತ್ತಿರದ ಆಯ್ದ ಗ್ರಾಮಗಳಾದ ನಾಗರಾಳ, ಹುಲಬೆಂಚಿ, ಕೊಣ್ಣೂರ, ಹಿರೂರ, ತಮದಡ್ಡಿಯ ಜೋಡೆತ್ತಿನ ರೈತರು ಎತ್ತಿನ ಬಂಡೆಗಳ ಮೇಲೆ ಆಗಮಿಸಲು ಕೋರಲಾಗಿದೆ. ಹಾಗಾಗಿ, ಜೋಡೆತ್ತಿನ ರೈತರು ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಲು ಹಾಗೂ ಸಾಯಂಕಾಲ 6 ಗಂಟೆಯ ಒಳಗಾಗಿ ಆಗಮಿಸಲು ತಿಳಿಸಲಾಗಿದೆ. 


 ಸೂಚನೆಗಳು 

1. ಮೊದಲು ನೋಂದಾಯಿತ 108 ಜೋಡೆತ್ತಿನ ರೈತರನ್ನು ಆದ್ಯತೆ ಮೇರೆಗೆ ಸನ್ಮಾನಿಸಲಾಗುವುದು.


2. ಎತ್ತುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆ ಇರುತ್ತದೆ.


3. ಉಪವಾಸ ಮಾಡುವವರಿಗೆ ಅಲ್ಪೋಪಹಾರ ವ್ಯವಸ್ಥೆ ಹಾಗೂ ಉಳಿದವರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ.


4. ಜಾಗರಣೆ ಕಾರ್ಯಕ್ರಮದಲ್ಲಿ‌ ಭಾಗವಹಿಸುವ ಭಕ್ತರು ಸ್ವಂತ ಹೊದಿಕೆಗಳನ್ನು ತರಬೇಕಾಗಿ ವಿನಂತಿ, ಏಕೆಂದರೆ ಅಂದಿನ ರಾತ್ರಿ ಬಹಳ ಚಳಿ ಇರುವ ಸಾಧ್ಯತೆಯಿದೆ.


5. ಮಹಾಶಿವರಾತ್ರಿ ಜಾಗರಣೆಯು ವೈಜ್ಞಾನಿಕವಾಗಿ ಹಲವು ರೀತಿಯ ಒಳಿತನ್ನು ತರುವುದರಿಂದ ತಮ್ಮ ಮನೆಯಲ್ಲಿ ಅಥವಾ ಮಠ-ಮಂದಿರ-ಆಶ್ರಮಗಳಲ್ಲಿ ಮಹಾಶಿವರಾತ್ರಿಯ ದಿನ ಎಲ್ಲರೂ ಜಾಗರಣೆ ಮಾಡಲು ಕೋರುತ್ತೇವೆ.


 ಪ್ರೇರಣೆ: ಅಭೀಃ ಫೌಂಡೇಶನ್, ವಿಜಯಪುರ


 ಹೆಚ್ಚಿನ‌ ಮಾಹಿತಿಗಾಗಿ ಸಂಪರ್ಕಿಸಿ: 9901447325 / 8884390598


missionsavesoil.com

ಜೋಡೆತ್ತು ಸಾಕಾಣಿಕೆದಾರರ ಸರ್ವ ಜಾತಿ ಹಾಗೂ ಸರ್ವ ಧರ್ಮ ಸಮ್ಮೇಳನ


ಜೋಡೆತ್ತು ಸಾಕಾಣಿಕೆ ಮಾಡುವ ರೈತರಿರದ ಯಾವುದೇ ಜಾತಿಯಿಲ್ಲ ಹಾಗೂ ಯಾವುದೇ ಧರ್ಮವೂ ಕೂಡ ಇಲ್ಲ. ಆದರೆ, ಇಂದು ಪ್ರತಿಯೊಂದು ಜಾತಿ ಹಾಗೂ ಧರ್ಮದಲ್ಲಿರುವ ಜೋಡೆತ್ತು ಸಾಕಾಣಿಕೆದಾರರು ತಾವು ಹಾಕಿದ ಬಂಡವಾಳವನ್ನೂ ಕೂಡ ಮರಳಿ ಪಡೆಯದ ಸ್ಥಿತಿಯಲ್ಲಿದ್ದಾರೆ. ಈ ಕಾರಣಕ್ಕಾಗಿ, ರೈತರು ಅನಿವಾರ್ಯವಾಗಿ ಎತ್ತುಗಳನ್ನು ಮಾರಾಟ ಮಾಡಿದಾಗ, ಅನೇಕ ಎತ್ತುಗಳು ಕಾಸಾಯಿಖಾನೆಯ ಪಾಲಾಗುತ್ತಿವೆ. ಎತ್ತುಗಳನ್ನು ಸಾಕಾಣಿಕೆ ಮಾಡುವ ರೈತರ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣ, ಹೋರಿಕರುಗಳನ್ನು ಸಾಕಿ ಸಲುಹಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಹೋರಿಕರುಗಳನ್ನು ಮಾರಾಟ ಮಾಡುವುದು ರೈತರಿಗೆ ಅನಿವಾರ್ಯವಾಗಿದೆ. ಈ ಕಾರಣಕ್ಕಾಗಿ, ಇಂದು ದಿನಾಲು ಲಕ್ಷಾಂತರ ಹೋರಿಕರುಗಳು ಕಾಸಾಯಿಖಾನೆಯ ಪಾಲಾಗುತ್ತಿವೆ. ನಮ್ಮ ಕಣ್ಣು ಮುಂದೆ ಓಡಾಡುವ ಜೀವಂತ ಬಾಲ ನಂದಿಗಳನ್ನು ಕಾಸಾಯಿಖಾನೆಗೆ ಕಳುಹಿಸುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡು, ನಾವು ದೇವಸ್ಥಾನಗಳಲ್ಲಿರುವ ನಂದಿಗಳನ್ನು ಪೂಜಿಸಿದರೆ, ದೇವಸ್ಥಾನಗಳಲ್ಲಿರುವ ಯಾವ ನಂದಿಯೂ ಕೂಡ ಮುಂದೆ ನಮ್ಮ ಮಕ್ಕಳು  ನರಕಯಾತನೆಯನ್ನು ಅನುಭವಿಸುವುದನ್ನು ತಪ್ಪಿಸಲಾರ. ಈ ಕಟು ಸತ್ಯದ ದರ್ಶನವು ಸಮಸ್ಯೆ ಕೈ ಮೀರಿ ಹೋಗುವ ಮುಂಚೆ ಸಮಾಜಕ್ಕೆ ಆಗಲೇಬೇಕಾಗಿದೆ.


ಗ್ರಾಮಗಳಲ್ಲಿ ಅನ್ನ ಸಂಪತ್ತು ಉಳಿಯಬೇಕಾದರೆ ನಂದಿ ಸಂಪತ್ತನ್ನು ಉಳಿಸಿಕೊಳ್ಳಲೇಬೇಕಾಗಿದೆ. ನಮ್ಮ ಗ್ರಾಮಗಳಲ್ಲಿರುವ ಹಿರಿಯ ರೈತರೊಂದಿಗೆ ಹಾಗೂ ಜೋಡೆತ್ತು ಸಾಕಾಣಿಕೆ ಮಾಡುವ ರೈತರೊಂದಿಗೆ ಈ ವಿಷಯದ ಕುರಿತು ಚರ್ಚಿಸಿದಾಗ ಜೋಡೆತ್ತುಗಳ ಮಹತ್ವದ ಕುರಿತು ನಮಗೆ ಖಂಡಿತ ಅರಿವಾಗುತ್ತದೆ. ಈ ಕಾರಣಕ್ಕಾಗಿ, ಪ್ರತಿಯೊಂದು ಜಾತಿ ಹಾಗೂ ಧರ್ಮದಲ್ಲಿರುವ ಜೋಡೆತ್ತುಗಳನ್ನು ಹೊಂದಿದ ರೈತರನ್ನು ಒಗ್ಗೂಡಿಸಿ ಜೋಡೆತ್ತುಗಳನ್ನು ಉಳಿಸಲು ಸೂಕ್ತ ಪರಿಹಾರ ಕಂಡುಕೊಳ್ಳಲು ಸರ್ವ ಜಾತಿ ಹಾಗೂ ಸರ್ವ ಧರ್ಮ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ.


ಮೊದಲ‌ ಹಂತದಲ್ಲಿ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಾಲೂಕು ಮಟ್ಟದ "ಜೋಡೆತ್ತು ಸಾಕಾಣಿಕೆದಾರರ ಸರ್ವ ಜಾತಿ ಹಾಗೂ ಸರ್ವ ಧರ್ಮ ಸಮ್ಮೇಳನ" ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ.‌ ಹಾಗಾಗಿ, ಸರ್ವರ ಒಳಿತನ್ನು ಒಳಗೊಂಡ ಈ ಕಾರ್ಯದಲ್ಲಿ  ಕೈ ಜೋಡಿಸಲು ಇಚ್ಚಿಸುವ ಆಸಕ್ತರು ಹೆಚ್ಚಿನ‌ ಮಾಹಿತಿ ಪಡೆಯಲು 8884390598 ಗೆ ಸಂಪರ್ಕಿಸಬಹುದು.


 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

missionsavesoil.com