ನಂದಿ ಪೋಷಕರಿಗೆ ಸನ್ಮಾನ2024ರ ಬಸವ ಜಯಂತಿ ಅಂಗವಾಗಿ "33 ಗ್ರಾಮಗಳಲ್ಲಿರುವ ಜೋಡೆತ್ತಿನ ಕೃಷಿಕರನ್ನು ಗುರುತಿಸಿ ಸನ್ಮಾನಿಸುವ  ವಿಶೇಷ ಕಾರ್ಯಕ್ರಮ" ಜೋಡೆತ್ತಿನ ರೈತರನ್ನು 

 ಶಿವನ ವಾಹನ ಪೋಷಕರು ಹಾಗೂ ಭವಿಷ್ಯದ ನಿರ್ಮಾತೃಗಳು 

ಎಂದು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ.


ಬಯಲು ಸೀಮೆಯ ಜೀವನಾಡಿಯಾದ ಜೋಡೆತ್ತಿನ ಕೃಷಿ ಉಳಿಸುವ ಉದ್ದೇಶದಿಂದ ನಂದಿ ಯಾತ್ರೆ ಎಂಬ ಅಭಿಯಾನವು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಜನ್ಮ ಸ್ಥಳವಾದ ಬಿಜ್ಜರಗಿಯಿಂದ ಪ್ರಾರಂಭವಾಗಿದೆ. ಮುಂದುವರೆದು, 2024ರ ಬಸವ ಜಯಂತಿಯ ಅಂಗವಾಗಿ ಪ್ರಜ್ಞಾವಂತರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಿ ಜೋಡೆತ್ತಿನ ಕೃಷಿಕರ ಮಹತ್ವ ಬಹು ಜನರಿಗೆ ತಿಳಿಯುವಂತೆ ಮಾಡುವ ಯೋಜನೆ ರೂಪಿಸಲಾಗಿದೆ. ಬಸವ ತತ್ವದ ಮೂಲ ಬೇರು ಜೊಡೆತ್ತಿನ ಕೃಷಿಯಾಗಿದೆ ಎನ್ನುವುದನ್ನು ಬಹು ಜನರಿಗೆ ತಿಳಿಸುವ ಉದ್ದೇಶ ಹೊಂದಲಾಗಿದೆ.


"ಕಾಯಕವೇ ಕೈಲಾಸ" ತತ್ವದ ಪೋಷಕರಾದ ಜೋಡೆತ್ತಿನ ರೈತರನ್ನು ಶಿವನ ವಾಹನ ಪೋಷಕರು ಹಾಗೂ ಭವಿಷ್ಯದ ನಿರ್ಮಾತೃಗಳು ಎಂದು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ಇದಾಗಿದೆ.


 ಜೋಡೆತ್ತಿನ ರೈತರಿಗೆ ಸನ್ಮಾನ ಮಾಡುವ ಕಿಟ್ ನಲ್ಲಿರುವ ಸಾಮಗ್ರಿಗಳ ವಿವರ. 


1. ಅಭಿನಂದನಾ ಪತ್ರ

2. ಟವೆಲ್- ಸಂತನ ನಂತರದ ಸ್ಥಾನ ನೀಡಿ‌ ಕಾಶಿ ಕೆಂಪು ಬಣ್ಣದ ಟವೆಲ್ ಮೂಲಕ ಸನ್ಮಾನ

3. ಟೊಪ್ಪಿಗೆ- 'ರೈತ ಮಿತ್ರ ಸ್ವಯಂ ಸೇವಕ' ಎಂಬ ಸಂದೇಶವಿರುವ ಟೊಪ್ಪಿಗೆ

4. ರೈತರಿಗೆ ಉಪಯೋಗವಾಗುವ ಟಾರ್ಚ್

5. ಜೋಡೆತ್ತುಗಳಿಗೆ ಉಪಯೋಗವಾಗುವ ಎರಡು ವಿಶೇಷ ಘಂಟೆಗಳು

6. ಚೀಲ- "ಜೋಡೆತ್ತಿನ ರೈತನೇ ಇಂದಿನ ನಿಜವಾದ ಶ್ರೀಮಂತ, ಏಕೆಂದರೆ ಹಲವು ಜನರಿಗೆ ಉದ್ಯೋಗ ನೀಡುವ ಶಕ್ತಿ ಜೊಡೆತ್ತಿನ ರೈತನಿಗಿದೆ" ಎಂಬ  ಸಂದೇಶವಿರುವ ಚೀಲ.


...........................................

ಪ್ರಜ್ಞಾವಂತರು ಹಾಗೂ ಸಂಘ ಸಂಸ್ಥೆಗಳು ತಮ್ಮ ಗ್ರಾಮದ ಜೊಡೆತ್ತಿನ ಕೃಷಿಕರಿಗೆ ಸನ್ಮಾನಿಸುವ ಕಾರ್ಯದಲ್ಲಿ ತನು-ಮನ-ಧನದಿಂದ ಮುಂದಾಳತ್ವ ವಹಿಸಬಹುದು. ಜೋಡೆತ್ತುಗಳ ಸಂತತಿ ಉಳಿಸಲು ಮುಂದಾಳತ್ವ ವಹಿಸುವ ಮಹನಿಯರಿಗೆ  ಜೋಡೆತ್ತಿನ ಕೃಷಿ ಪ್ರೋತ್ಸಾಹಕರು ಎಂದು ಗುರುತಿಸಿ ಸನ್ಮಾನಿಸಲಾಗುವುದು. ಈ ಮೂಲಕ ತಮ್ಮ ಗ್ರಾಮದ ಜೋಡೆತ್ತಿನ ಕೃಷಿಕರನ್ನು ಸನ್ಮಾನಿಸಿ ಜೋಡೆತ್ತಿನ ಕೃಷಿಕರ ಮಹತ್ವ ಬಹು ಜನರಿಗೆ ತಿಳಿಸಿ ಬಸವಣ್ಣನವರ ಕೃಪೆಗೆ ಪಾತ್ರರಾಗಬಹುದು.   


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8884390598 / 9901447325 /9110885321


 ಜೋಡೆತ್ತಿನ ಕೃಷಿ ಉಳಿದರೆ ಮಾತ್ರ ಬಯಲು ಸೀಮೆಯ ನಾಗರೀಕತೆಗಳು ಉಳಿಯಲು ಸಾಧ್ಯ. 


 ಜೋಡೆತ್ತುಗಳ ಕೃಷಿ ಉಳಿಸಲು ಮುಂದಾದರೆ ಮಾತ್ರ ನಾವು ಆಚರಿಸುವ ಬಸವ ಜಯಂತಿಯು ಅರ್ಥಪೂರ್ಣವಾಗಿರುವುದು 


 ಇಂದ: ರೈತ ಮಿತ್ರ ಸ್ವಯಂ‌ ಸೇವಕರು

 ಪ್ರೇರಣೆ: ಅಭೀಃ ಫೌಂಡೇಶನ್


 ಸಂಪರ್ಕಿಸಿ: missionsavesoil.com


 PLEASE SHARE IT TO ALL